ಬಿಡುಗಡೆಯಾಯ್ತು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ.. ಒಳ್ಳೆಯ ರೆಸ್ಪಾನ್ಸ್ ಗಳಿಸಿಕೊಂಡ ಚಾರ್ಲಿ….

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನೆಮಾ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನೆಮಾ ಇಂದು ಪ್ರಪಂಚಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಇನ್ನೂ ಕೆಜಿಎಫ್-2 ಬಳಿಕ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದ 777 ಚಾರ್ಲಿ ಒಳ್ಳೆಯ ರೆಸ್ಪಾನ್ಸ್ ಗಳಿಸಿಕೊಂಡಿದೆ. ಸದ್ಯ ಈ ಸಿನೆಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಚರ್ಚೆಗಳು ನಡೆಯುತ್ತಿವೆ.

ಪ್ರಾಣಿಪ್ರಿಯರನ್ನು ರಂಜಿಸುವ ನಿಟ್ಟಿನಲ್ಲಿ 777 ಚಾರ್ಲಿ ಸಿನೆಮಾವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಸಿನೆಮಾದ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಕುರಿತು ಲೆಕ್ಕಾಚಾರಗಳು ಶುರುವಾಗಿದೆ. ಕೆಜೆಎಫ್-2 ಸಿನೆಮಾದ ಪಕ್ಕಾ ಮಾಸ್ ಸಿನೆಮಾ ಆಗಿದ್ದು, 777 ಚಾರ್ಲಿ ಸಿನೆಮಾ ಪಕ್ಕಾ ಎಮೊಷನಲ್ ಸಿನೆಮಾ ಆಗಿದೆ. ಈಗಾಗಲೇ ಕೆಜಿಎಫ್-2 ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಇದೀಗ 777 ಚಾರ್ಲಿ ಸರದಿಯಾಗಿದೆ. ಕನ್ನಡದ ಮತ್ತೊಂದು ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಲಿದೆ ಏಂದು ಹೇಳಲಾಗುತ್ತಿದೆ. ಈಗಾಗಲೇ ಚಾರ್ಲಿ ಸಿನೆಮಾದ ಸಹ ಜೋರಾಗಿಯೇ ಸದ್ದು ಮಾಡುತ್ತಿದೆ. ಇನ್ನೂ ಬಾಕ್ಸ್ ಆಫೀಸ್ ನಲ್ಲಿ 777 ಚಾರ್ಲಿ ಒಳ್ಳೆಯ ಕಲೆಕ್ಷನ್ ಮಾಡಿದರೇ ಸಿನೆಮಾ ಗೆದ್ದಂತೆ. ಕನ್ನಡದ ಪ್ಯಾನ್ ಇಂಡಿಯಾ ಸಿನೆಮಾ ಸಹ ಗೆದ್ದಂತೆ ಆಗುತ್ತೆ. ಇನ್ನೂ ಸಿನೆಮಾ ಬಿಡುಗಡೆಯಾದ ಮೊದಲನೇ ದಿನವೇ ಹತ್ತು ಕೋಟಿ ಕಲೆಕ್ಷನ್ ಮಾಡಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆಯಂತೆ.

ಇನ್ನೂ 777 ಚಾರ್ಲಿ ಸಿನೆಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಜೊತೆಗೆ ಹಿಂದಿಯಲ್ಲೂ ಸಹ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಇನ್ನೂ ಸಿನೆಮಾ ನೋಡಿದ ಪ್ರತಿಯೊಬ್ಬರು ಭಾವುಕರಾಗಿ ಹೊರಬರುತ್ತಿದ್ದಾರೆ. ಈ ರೆಸ್ಪಾನ್ಸ್ ನೋಡಿ ಸಿನೆಮಾ ಪ್ರಪಂಚಾದ್ಯಂತ ಹತ್ತಿರಹತ್ತಿರ ಹದಿನೈದು ಕೋಟಿ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ. 777 ಚಾರ್ಲಿ ಸಿನೆಮಾ ರಕ್ಷಿತ್ ಶೆಟ್ಟಿ  ಸಿನಿ ಕೆರಿಯರ್‍ ನಲ್ಲಿ ಒಳ್ಳೆಯ ಸಿನೆಮಾ ಆಗಲಿದೆ ಎನ್ನಲಾಗುತ್ತಿದ್ದು, ಸಿನೆಮಾ ಒಟ್ಟಾರೆಯಾಗಿ ಎಂಭತ್ತು ಕೋಟಿ ಆಸುಪಾಸು ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತದೆ.

ಇನ್ನೂ 777 ಚಾರ್ಲಿ ಸಿನೆಮಾದಲ್ಲಿ ಚಾರ್ಲಿ ಪಾತ್ರದಲ್ಲಿ ಕಾಣಿಸಿಕೊಂಡ ನಾಯಿಗೆ ಅಭಿಮಾನ ಸಂಘಗಳು ಹುಟ್ಟಿಕೊಂಡಿವೆ. ಈ ಸಿನೆಮಾದಲ್ಲಿ ನಾಯಿ ಇದೀಗ ಸೆಲೆಬ್ರೆಟಿಯಾಗಿದೆ. 777 ಚಾರ್ಲಿ ಸಿನೆಮಾದಲ್ಲಿ ಒಟ್ಟು ನಾಲ್ಕು ನಾಯಿಗಳು ನಟಿಸಿವೆ. ಈ ನಾಯಿಗಳಿಗೆ ತರಬೇತಿ ಕೊಟ್ಟಿ ಸಿನೆಮಾದಲ್ಲಿ ಅಭಿನಯಿಸುವಂತೆ ಮಾಡಲಾಗಿದೆ. ಚಾರ್ಲಿ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೀಗ ಚಾರ್ಲಿಗೆ ರಾಜ್ಯದ ಅನೇಕ ಕಡೆ ಅಭಿಮಾನಿ ಸಂಘ ಹುಟ್ಟಿಕೊಂಡಿದೆ. ಈ ಅಭಿಮಾನಿ ಸಂಘಗಳಿಗೆ ಚಾರ್ಲಿ ಅಭಿಮಾನಿಗಳ ಸಂಘ ಎಂದು ಹೆಸರಿಡಲಾಗಿದ್ದು, ಸಂಘದ ಪೋಸ್ಟರ್‍ ಗಳನ್ನು ಹರಿಬಿಡಲಾಗಿದೆ. ಇದೀಗ ಈ ಪೊಸ್ಟರ್‍ ಎಲ್ಲೆಡೆ ವೈರಲ್ ಆಗುತ್ತಿವೆ.

Previous articleಹುಟ್ಟು ಹಬ್ಬದ ಸಂಭ್ರಮದಲ್ಲಿ ನಂದಮೂರಿ ಬಾಲಕೃಷ್ಣ, ಹುಟ್ಟಹಬ್ಬಕ್ಕಾಗಿ NBK107 ಟೀಸರ್ ಕೊಡುಗೆ…..!
Next articleಮಸಾಜ್ ವಿಡಿಯೋ ಶೇರ್ ಮಾಡಿದ ನಟಿ ಪಾಯಲ್.. ವಿಡಿಯೋ ಸಿಕ್ಕಾಪಟ್ಟೆ ವೈರಲ್…