Current Issues

70ನೇ ವಯಸ್ಸಿನಲ್ಲಿ ಮದ್ವೆಯಾಗಲು ಹೋಗಿ 28 ಲಕ್ಷ ಕಳೆದುಕೊಂಡ ಅಜ್ಜ! ಆಗಿದ್ದೇನು ಗೊತ್ತಾ

ಯಾವ ವಯಸ್ಸಿನಲ್ಲಿ ಏನು ಮಾಡಬೇಕು ಎಂಬುದು ಜನರಿಗೆ ತಿಳಿದಿರಬೇಕು. ವಯಸ್ಸಲ್ಲದ ವಯಸ್ಸಿನಲ್ಲಿ ಮಾಡಬಾರದ್ದನ್ನು ಮಾಡಬಲು ಹೊರಟರೆ ಆಗಬಾರದ್ದು ಆಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಮುಂಬೈ ನಲ್ಲಿ ಒಂದು ಘಟನೆ ನಡೆದಿದೆ. 70 ವರ್ಷದ ವೃದ್ಧರೊಬ್ಬರು ಒಬ್ಬ ವಿಧವೆಯನ್ನು ಮದುವೆಯಾಗಲು ನಿರ್ಧರಿಸಿ 28 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. 2019 ರಲ್ಲಿ ವೃದ್ಧನ ಪತ್ನಿ ಮೃತರಾಗಿದ್ದರೆ. ಮನೆಯಲ್ಲಿ ಒಂಟಿಯಾಗಿದ್ದ ವೃದ್ಧನಿಗೆ ಅವಈ ಸ್ನೇಹಿತರೊಬ್ಬರು ಮತ್ತೊಂದು ಮದುವೆಯಾಗಲು ಸಲಹೆ ನೀಡುತ್ತಾರೆ. ಸ್ನೇಹಿತನ ಸಲಹೆಯ ಪ್ರಕಾರ ಮದುವೆಯಾಗಲು ನಿರ್ಧರಿಸುವ ವೃದ್ಧರು, ಮದುವೆಯಾಗಲು ಹೆಣ್ಣನ್ನು ಹುದುಕುವಂತೆ ಸ್ನೇಹಿತನಿಗೆ ಹೇಳುತ್ತಾರೆ.
ಅದರಂತೆಯೇ ಅವರ ಸ್ನೇಹಿತ 21 ವರ್ಷದ ಮಗಳಿರುವ ಒಬ್ಬ ವಿಧವೆಯನ್ನು ಮದುವೆಯಾಗಲು ಸ್ನೇಹಿತನಿಗೆ ಸೂಚಿಸುತ್ತಾನೆ. ಇದನ್ನು ಒಪ್ಪಿಕೊಳ್ಳುತ್ತಾರೆ ವೃದ್ಧರು. ವಿಧವೆಯಾದ ಆಕೆ ಜೈಪುರದವರು. ಎರಡು ಕುಟುಂಬದ ನಡುವೆ ಮದುವೆ ಮಾತುಕತೆ ನಡೆದು, ಮದುವೆಗೆ ಒಪ್ಪಿಕೊಳ್ಳುತ್ತಾರೆ. ನಂತರ ಆಕೆ ಅವರ ಮಗಳು ಹಾಗೂ ತಂದೆ ಮೂವರು ಬಂದು ವೃದ್ಧರ ಮನೆಯಲ್ಲೇ ವಾಸ ಮಾಡಲು ಶುರು ಮಾಡುತ್ತಾರೆ. ಆಕೆ ಜೈಪುರದವರಾಗಿರುವುದರಿಂದ ಅಲ್ಲಿಯೇ ಇಬ್ಬರು ರಿಜಿಸ್ಟರ್ ಮದುವೆ ಮಾಡಿಕೊಳ್ಳೋಣ ಎಂದು ವೃದ್ಧರಿಗೆ ಹೇಳುತ್ತಾಳೆ. ವೃದ್ಧರು ಸಹ ಇದಕ್ಕೆ ಒಪ್ಪಿಕೊಳ್ಳುತ್ತಾರೆ. ಜೈಪುರಕ್ಕೆ ಹೋಗಿ ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡ ನಂತರ, ಸಬ್ ರಿಜಿಸ್ಟರ್ ಕಚೇರಿಯಲ್ಲಿ ಒಂದು ತಿಂಗಳು ಬಿಟ್ಟು ಬರಲು ಹೇಳುತ್ತಾರೆ. ಹಾಗಾಗಿ ಒಂದು ತಿಂಗಳು ಬಿಟ್ಟು ಬರಬೇಕು ಎಂದು ಮುಂಬೈ ಮನೆಗೆ ವಾಪಸ್ ಬರುತ್ತಾರೆ.
ವೃದ್ಧನ ಮನೆಯಲ್ಲೇ ಉಳಿದಿದ್ದ ವಿಧವೆ ಮತ್ತು ಆಕೆಯ ಮನೆಯವರು ಕೆಲ ದಿನಗಳ ನಂತರ ಮನೆಯಲ್ಲಿದ್ದ ಒಡೆವೆಗಳು, ಹಣ ಹಾಗೂ ಕೆಲವು ಆಸ್ತಿಪತ್ರವನ್ನು ಕೂಡ ಕದ್ದು ಮೂವರೂ ಮನೆಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಮನೆಯಲ್ಲಿ ಯಾರೂ ಕಾಣಿಸುತ್ತಿಲ್ಲವೆಂದು ನೋಡತೊಡಗಿದ್ದ ವೃದ್ಧರಿಗೆ, ಇವರು ಕದ್ದಿರುವ ವಿಷಯ ಗೊತ್ತಾಗಿದೆ. ನಂತರ ಸ್ನೇಹಿತನೊಡನೆ ಇವರನ್ನು ಹುಡುಕಿಕೊಂಡು ಜೈಪುರಕ್ಕೆ ಹೋಗಿದ್ದಾರೆ. ಹೋದ ನಂತರ ಅವರ ಅಸಲಿ ಬಣ್ಣ ಗೊತ್ತಾಗಿದೆ. ಮೋಸದ ಜಾಲವನ್ನು ತಿಳಿದ ವೃದ್ಧರಿಗೆ ಸ್ಥಳದಲ್ಲೇ ಹೃದಯಾಘಾತವಾಗಿದೆ. ಆನಂತರ ಅವರನ್ನು ಮುಂಬೈಗೆ ಕರೆತರಲಾಗಿದೆ. ಮುಂಬೈಗೆ ಬಂದ ನಂತರ ವೃದ್ಧರಿಗೆ ಮಾನಸಿಕ ಖಿನ್ನತೆ ಶುರುವಾಗಿದೆ. ಇತ್ತೀಚೆಗೆ ಮತ್ತೆ ಅವರಿಗೆ ಹೃದಯಾಘಾತ ಆಗಿರುವ ಕಾರಣ, ಆ ಸಮಯದಲ್ಲಿ ಅವರು ಪೊಲೀಸರಿಗೆ ದೂರು ನೀಡಿರುವ ಕಾರಣ ಈ ಪ್ರಕರಣ ಒಂದು ವರ್ಷದ ನಂತರ ಬೆಳಕಿಗೆ ಬಂದಿದೆ.

Trending

To Top