News

54 ನೇ ವರ್ಷಕ್ಕೆ ಕಾಲಿಟ್ಟ ಸಲ್ಲು: ಬರ್ತ್ ಡೇ ಪಾರ್ಟಿಯಲ್ಲಿ ಕಿಚ್ಚ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಇಂದು 54 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಜನ್ಮದಿನವನ್ನು ತಮ್ಮ ಸ್ನೇಹಿತರೊಂದಿಗೆ ಆಚರಿಸಿದರು. ಇಂದು ಸಲ್ಮಾನ್ ಖಾನ್ ಜನ್ಮದಿನ ಹಿನ್ನೆಲೆಯಲ್ಲಿ ಸಹೋದರ ಸೊಹೈಲ್ ಅವರು ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದ ಅತಿಥಿಯಾಗಿ ನಟಿ ಕತ್ರಿನಾ ಕೈಫ್, ಟಬು, ಸಲ್ಮಾನ್ ಖಾನ್ ಅವರ ವದಂತಿಯ ಗೆಳತಿ ಇಲಿಯಾ ವಂತೂರ್, ನಟ ಕಿಚ್ಚ ಸುದೀಪ್ ಸೇರಿದಂತೆ ಎಲ್ಲರೂ ಈ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಲ್ಮಾನ್ಗೆ ವಿಶ್ ಮಾಡಿದರು.

ಅಲ್ಲದೇ, ದಬಾಂಗ್ 3 ಸಹನಟರಾದ ಸೋನಾಕ್ಷಿ ಸಿನ್ಹಾ, ಸೈಯಿ ಮಂಜ್ರೇಕರ್ ಮತ್ತು ಕಿಚ್ಚ ಸುದೀಪ್ ಅವರೊಂದಿಗೆ ಸೊಹೈಲ್ ಖಾನ್ ಅವರ ನಿವಾಸಕ್ಕೆ ಆಗಮಿಸಿದ ಸಲ್ಮಾನ್ ಖಾನ್ ಅವರು ಸ್ಥಳದಲ್ಲಿ ಕೇಕ್ ಕತ್ತರಿಸುವ ಫೋಟೋ ತೆಗೆಯಲಾಗಿದೆ

Trending

To Top