Film News

ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ 30 ರೋಜುಲ್ಲೋ ಪ್ರೇಮಿಚಡಂ ಎಲಾ?

ಹೈದರಾಬಾದ್: ಕೇವಲ ಒಂದು ಹಾಡಿನ ಮೂಲಕವೇ ದೇಶವ್ಯಾಪಿ ಹಿಟ್ ಕಂಡ ನೀಲಿ ನೀಲಿ ಆಕಾಶಂ ಗೀತೆಯುಳ್ಳ ಚಿತ್ರ ‘30 ರೋಜುಲ್ಲೋ ಪ್ರೇಮಿಚಡಂ ಎಲಾ’ಚಿತ್ರ ಇದೇ ಜನವರಿ 29 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ.

ಖ್ಯಾತ ಕಿರುತೆರೆ ನಿರೂಪಕ ಪ್ರದೀಪ್ ಮಾಚಿರಾಜು ಹಾಗೂ ಕರ್ನಾಟಕ ಮೂಲದ ನಟಿ ಅಮೃತಾ ಐಯ್ಯರ್ ಇವರಿಬ್ಬರ ಕಾಂಬಿನೇಷನ್ ನಲ್ಲಿ ನಿರ್ಮಾಣವಾಗಿರುವ ‘30 ರೋಜುಲ್ಲೋ ಪ್ರೇಮಿಚಡಂ ಎಲಾ’ಚಿತ್ರದಲ್ಲಿನ ನೀಲಿ ನೀಲಿ ಆಕಾಶಂ ಎಂಬ ಗೀತೆ ಯೂಟೂಬ್ ನಲ್ಲಿ ಭಾರಿ ಮಟ್ಟಿಗೆ ಸದ್ದು ಮಾಡಿತ್ತು. ಯುವಜನತೆಯ ಮೊಬೈಲ್ ಗಳ ರಿಂಗ್ ಟೋನ್ ಸೇರಿದಂತೆ ಎಲ್ಲರ ಬಾಯಲ್ಲೂ ಇದೇ ಹಾಡು ಕೇಳಿಸುತ್ತಿತ್ತು. ಈ ಗೀತೆಯನ್ನು ಸುಮಾರು 22 ಕೋಟಿಗೂ ಹೆಚ್ಚಾಗಿ ವೀಕ್ಷಣೆ ಮಾಡಲಾಗಿದೆ. ಈ ಗೀತೆಗೆ ಅನೂಪ್ ರುಬೆನ್ಸ್ ಸಂಗೀತ ಸಂಯೋಜನೆ ಮಾಡಿದ್ದು, ಚಂದ್ರಬೋಸ್ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಗಾಯಕರಾದ ಸಿದ್ ಶ್ರೀರಾಮ್ ಹಾಗೂ ಸುನಿತಾ ಹಾಡಿಗೆ ಧ್ವನಿಕೊಟ್ಟಿದ್ದಾರೆ.

ಇದೀಗ ಈ ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬಿಡುಗಡೆ ಮಾಡಲು ದಿನಾಂಕ ಘೋಷಣೆ ಮಾಡಿದ್ದಾರೆ. ಇನ್ನೂ ಈ ಚಿತ್ರವನ್ನು ಆಂಧ್ರಪ್ರದೇಶ ಹಾಗೂ ತೆಲಂಗಾಣದ ೪೦೦ ಚಿತ್ರಮಂದಿರಗಳಲ್ಲಿ ಹಾಗೂ ಕರ್ನಾಟಕದ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರ ಗೀತಾ ಆರ್ಟ್ಸ್ ಬ್ಯಾನರ್ ನಡಿ ಜನವರಿ 29 ರಂದು ಬಿಡುಗಡೆಯಾಗಲಿದೆ.

ಇನ್ನೂ ಈ ಚಿತ್ರವನ್ನು ಕರ್ನಾಟಕದ ಖ್ಯಾತ ನಿರ್ಮಾಪಕ ಎಸ್.ವಿ.ಬಾಬು ನಿರ್ಮಾಣ ಮಾಡಿದ್ದು, ಹನಿಮೂನ್ ಎಕ್ಸ್ ಪ್ರೆಸ್ ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಬಾಬು ರವರು ರಕ್ಷಿತ್ ಶೆಟ್ಟಿ ಅಭಿನಯದ ರಿಕ್ಕಿ ಚಿತ್ರ ಸೇರಿದಂತೆ ಅನೇಕ ಕನ್ನಡ ಸಿನೆಮಾಗಳನ್ನು ನಿರ್ಮಿಸಿದ್ದಾರೆ.

Trending

To Top