ತಿರುವನಂತಪುರ: ಮೆಗಾಫ್ಯಾಮಿಲಿಯ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ರವರು ಸಿನಿರಂಗದಲ್ಲಿ ತಮ್ಮದೇ ಆದ ವಿಶೇಷ ರೀತಿಯಲ್ಲಿ ಸಾಧನೆ ಮಾಡಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ. ಇದೀಗ ಕೇರಳದ 3 ವರ್ಷದ ಪುಟಾಣಿ ಮಗುವೊಂದು ಅಲ್ಲು ಅರ್ಜುನ್ ರವರಿಗೆ ವೀರ ಅಭಿಮಾನಿಯಾಗಿ, ಅವರ ಭೇಟಿಗಾಗಿ ಕಾಯುತ್ತಿದೆ.
ಮಲಯಾಳಂನ ನಟಿ ವಿ.ಜೆ ಶಿಲ್ಪಾ ಬಾಲ ಹಾಗೂ ವಿಷ್ಣು ಗೋಪಾಲ ಎಂಬುವವರ 3 ವರ್ಷದ ಕಂದಮ್ಮ ಯಮಿಕಾ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ರವರಿಗೆ ಡೈ ಹಾರ್ಡ್ ಫ್ಯಾನ್ ಆಗಿದ್ದಾರೆ. ಇನ್ನೂ ಶಿಲ್ಪಾ ಬಾ ತಮ್ಮ ಮಗಳ ಅಲ್ಲು ಅರ್ಜುನ್ ಫ್ಯಾನ್ ಆಗಿರುವ ಬಗ್ಗೆ ಹಾಗೂ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗುವ ಬಗ್ಗೆ ಅವರ ಯೂಟೂಬ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇನ್ನೂ ಶಿಲ್ಪಾ ಬಾಲ ತಮ್ಮ ಮಗಳಾದ ಯಮಿಕಾ ಅಲ್ಲು ಅರ್ಜುನ್ ಮೇಲೆ ಯಾವ ರೀತಿಯಲ್ಲಿ ಅಭಿಮಾನ ಇಟ್ಟುಕೊಂಡಿದ್ದಾಳೆ ಎಂಬುದರ ಬಗ್ಗೆ ವಿಡಿಯೋ ತುಣುಕೊಂದನ್ನು ಶೇರ್ ಮಾಡಿದ್ದು, ಈ ವಿಡಿಯೋದಲ್ಲಿ ತಮ್ಮ ಮಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ವಿಡಿಯೋ ಅಲ್ಲು ಅರ್ಜುನ್ ರವರ ವೀರಾಭಿಮಾನಿ ಕೇವಲ 3 ವರ್ಷದ ಯಮಿಕಾಳದ್ದು, ನಾನು ಪ್ರತಿ ನಿತ್ಯ ನನ್ನ ಮಗಳ ಚಟುವಟಿಕೆಗಳಲ್ಲಿ ಶೇ.50 ರಷ್ಟನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿರುವೆ. ದಿನನಿತ್ಯ ನನ್ನ ಮಗಳು ನಟ ಅಲ್ಲು ಅರ್ಜುನ್ ರವರನ್ನು ಕಲವರಿಸುತ್ತಿರುತ್ತಾರೆ. ಒಂದಲ್ಲ ಒಂದು ದಿನ ನಾನು ನನ್ನ ಮಗಳ ಕನಸಾದ ಅಲ್ಲು ಅರ್ಜುನ್ ರವರ ಭೇಟಿಯನ್ನು ಮಾಡಿಸಿ ಆಕೆಯ ಆಸೆಯನ್ನು ಈಡೆರಿಸುತ್ತೇನೆ. ತಾವು ಸಹ ಈ ವಿಡಿಯೋ ನೋಡಿ ಆನಂದಿಸಿ ಎಂದಿದ್ದಾರೆ ಶಿಲ್ಪಾ ಬಾಲ.
