ಚೆನೈ: ಕೊರೋನಾ ಲಾಕ್ಡೌನ್ ನಂತರ ಬಿಡುಗಡೆಯಾದ ಸ್ಟಾರ್ ನಟರ ಚಿತ್ರಗಳಲ್ಲಿ ಮೊದಲ ಸಾಲಿನಲ್ಲಿ ಮಾಸ್ಟರ್ ಇದ್ದು, ಬಿಡುಗಡೆಯಾದ 9 ದಿನದಲ್ಲೇ ಸುಮಾರು 200 ಕೋಟಿ ಗಳಿಕೆ ಮಾಡಿದೆ.
ಕೊರೋನಾ ನಿಯಮಗಳಂತೆ ಚಿತ್ರಮಂದಿರಗಳಲ್ಲಿ ಶೇ.೫೦ ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶವಿದ್ದು, ಇದರ ನಡುವೆಯೇ ಧೈರ್ಯ ಮಾಡಿ ಮಾಸ್ಟರ್ ಚಿತ್ರ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಬಳಿಕ ಮಾಸ್ಟರ್ ಚಿತ್ರಕ್ಕೆ ದೇಶ ಹಾಗೂ ವಿದೇಶದಲ್ಲೂ ಬಿಗ್ ರೆಸ್ಪಾನ್ಸ್ ದೊರೆತಿದೆ. ಇನ್ನೂ ಚಿತ್ರಮಂದಿರಗಳಲ್ಲಿ ಶೇ.೧೦೦ ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದರೇ, ಇನಷ್ಟು ಆದಾಯ ಗಳಿಸುತ್ತಿತ್ತು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಮಾಸ್ಟರ್ ಚಿತ್ರವನ್ನು ಪೈರಸಿ ಮಾಡಿ ಲೀಕ್ ಮಾಡಿದ್ದರೂ ಕೂಡ ಈ ಮಟ್ಟಿಗೆ ಆದಾಯ ಗಳಿಸಿರುವುದು ದಾಖಲೆಯೇ ಎನ್ನಬಹುದಾಗಿದೆ.
ಇನ್ನೂ ತಮಿಳುನಾಡಿನಲ್ಲಿ ಮಾತ್ರ ೧೦೦ ಕೋಟಿ ಗಳಿಸಿರುವ ಮಾಸ್ಟರ್ ಚಿತ್ರ ವಿಜಯ್ ಚಿತ್ರಗಳ ಪೈಕಿ ಮಾಸ್ಟರ್ ೪ನೇ ಸ್ಥಾನದಲ್ಲಿ ೨೦೦ ಕೋಟಿ ಗಳಿಸಿದೆ. ಈ ಹಿಂದೆ ಮೆರ್ಸಲ್, ಸರ್ಕಾರ್, ಬಿಗಿಲ್ ಚಿತ್ರಗಳೂ ಸಹ ೨೦೦ ಕೋಟಿ ಕ್ಲಬ್ನಲ್ಲಿ ಸೇರಿತ್ತು. ನಂತರ ಸ್ಥಾನ ಮಾಸ್ಟರ್ ಗಳಿಸಿದೆ. ಇನ್ನೂ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಹ ಮಾಸ್ಟರ್ ದಾಖಲೆಯ ಗಳಿಕೆಯನ್ನು ಕಂಡಿದೆ. ಸುಮಾರು ೧೩ ಕೋಟಿಯಷ್ಟು ಆದಾಯವನ್ನು ಮಾಸ್ಟರ್ ಚಿತ್ರ ಗಳಿಸಿದೆ.
ಮಾಸ್ಟರ್ ಚಿತ್ರವನ್ನು ಒಟಿಟಿ ಯಲ್ಲೂ ಸಹ ಬಿಡುಗಡೆ ಮಾಡಲು ಸಹ ಚರ್ಚೆಗಳು ನಡೆಯುತ್ತಿದೆ ಎನ್ನಲಾಗಿದ್ದು, ಒಂದು ಚಿತ್ರ ಬಿಡುಗಡೆಯಾದ ಬಳಿಕ ೫೦ದಿನಗಳು ಪೂರೈಸುವ ವರೆಗೂ ಒಟಿಟಿ ಯಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ ಎನ್ನಲಾಗಿದ್ದು, ಸದ್ಯ ಸ್ಥಿತಿಗಳಿಂದ ಶೀಘ್ರದಲ್ಲಿಯೇ ಮಾಸ್ಟರ್ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
