Film News

ಫೆ.22 ರಂದು 1980 ಟೀಸರ್ ಬಿಡುಗಡೆ!

ಬೆಂಗಳೂರು: ಕೊರೋನಾ ಲಾಕ್‌ಡೌನ್ ನಂತರ ಸೆಟ್ಟೇರಿದ್ದ ಪ್ರಿಯಾಂಕ ಉಪೇಂದ್ರ ಅಭಿನಯದ 1980 ಸಿನೆಮಾದ ಶೂಟಿಂಗ್ ಮುಕ್ತಾಯವಾಗಿದ್ದು, ಇದೇ ಫೆ.22, 2021 ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.

ನಟಿ ಪ್ರಿಯಾಂಕ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ 1980 ಸಿನೆಮಾ ವಿಭಿನ್ನ ಶೈಲಿಯಲ್ಲಿ ಚಿತ್ರ ತಯಾರಾಗುತ್ತದ್ದು, ಮಡಿಕೇರಿ, ಚಿಕ್ಕಮಂಗಳೂರಿನ ಸುತ್ತುಮತ್ತಲಿನ ಪ್ರದೇಶದಲ್ಲಿ ಬಹುತೇಕ ಶೂಟಿಂಗ್ ಕೆಲಸಗಳು ನಡೆದಿದೆ. ಇದೀಗ ಚಿತ್ರತಂಡ ಶೂಟಿಂಗ್ ಮುಗಿಸಿದ್ದು, ಟೀಸರ್ ಫೆ.22 ರಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿ ಚಿತ್ರತಂಡ ಪ್ರಕಟಿಸಿದ್ದು, ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯೊಬ್ಬರ ಬರಲಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

1980 ಚಿತ್ರವನ್ನು ಸವಾರಿ-2, ವಸಂತ ಕಾಲ, ಮಿಸ್ಡ್ ಕಾಲ್ ಮೊದಲಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶನಾಗಿ ಕೆಲಸ ಮಾಡಿರುವ ರಾಜ್ ಕಿರಣ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಮೊದಲ ಬಾರಿಗೆ ನಿರ್ದೇಶಕನಾಗಿ 1980 ಸಿನೆಮಾವನ್ನು ಮಾಡುತ್ತಿದ್ದಾರೆ.

 

ಇನ್ನೂ ಈ ಸಿನೆಮಾದಲ್ಲಿ ಪ್ರಿಯಾಂಕಾ ಉಪೇಂದ್ರ ರವರೊಂದಿಗೆ ಶ್ರೀಧರ್, ಮುರಳಿ ಶರ್ಮಾ, ಅರವಿಂದ್ ರಾವ್ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಇನ್ನೂ ಪ್ರಿಯಾಂಕ ಉಪೇಂದ್ರ ಹಾರರ್ ಸಿನೆಮಾ ಒಂದರಲ್ಲಿ, ಉಗ್ರಾವತಾರ ಚಿತ್ರದಲ್ಲಿ ಹಾಗೂ ಲೈಫ್ ಈಸ್ ಬ್ಯೂಟಿಪುಲ್ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Trending

To Top