Film News

138 ಮಿಲಿಯನ್ ವೀಕ್ಷಣೆ ಕಂಡ ಕೆಜಿಎಫ್-2 ಟೀಸರ್

ಬೆಂಗಳೂರು: ಇಡೀ ವಿಶ್ವದಲ್ಲೇ ಕೆಜಿಎಫ್-2 ಟೀಸರ್ ನ ಹವಾ ನಡೆಯುತ್ತಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಸುಮಾರು 138 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಣೆ ಮಾಡಿ ಇತಿಹಾಸ ಸೃಷ್ಟಿ ಮಾಡಿದೆ.

ಭಾರತದಲ್ಲಿ ಯೂಟೂಬ್ ನಲ್ಲಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಕೆಜಿಎಫ್-2 ಟೀಸರ್ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ ಎನ್ನಲಾಗಿದೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡಿದ್ದ ಬಾಹುಬಲಿ ಟ್ರೈಲರ್ ದಾಖಲೆಯನ್ನು ಸಹ ಕೆಜಿಎಫ್-2 ಟೀಸರ್ ಮುರಿದಿದೆ. ಬಾಹುಬಲಿ ತೆಲುಗು ಟ್ರೈಲರ್ ಸುಮಾರು 64 ಮಿಲಿಯನ್ ವೀಕ್ಷಣೆ ಕಂಡಿತ್ತು. ಆದರೆ ಕೆಜಿಎಫ್-2 138 ಮಿಲಿಯನ್ ವೀಕ್ಷಣೆಯಾಗಿದೆ.

ಭಾರತದ ಸಿನಿರಂಗದ ಇತಿಹಾಸದಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಭಾರತದ ಮೊದಲ ಟೀಸರ್ ಎಂಬ ಹೆಗ್ಗಳಿಗೆ ಪಾತ್ರವಾದ ಕೆಜಿಎಫ್-2 ಟೀಸರ್ ಯೂಟೂಬ್ ನಲ್ಲಿ ಟ್ರೆಂಡಿಂಗ್ ಶುರು ಮಾಡಿದೆ. ಅಂದಹಾಗೆ ಬಾಹುಬಲಿ-2 ಹಿಂದಿ ಭಾಷೆಯ ಟ್ರೈಲರ್ ಸುಮಾರು 118 ಮಿಲಿಯನ್ ವೀಕ್ಷಣೆ ಕಂಡಿತ್ತು. ಇದೀಗ ಈ ರೆಕಾರ್ಡ್‌ನ್ನು ಸಹ ಕೆಜಿಎಫ್-2 ಟೀಸರ್ ಬೀಟ್ ಮಾಡಿದೆ. ಇನ್ನೂ ಈ ದಾಖಲೆಯನ್ನು ಮುರಿಯುವ ಚಿತ್ರವಾದರೂ ಯಾವುದು ಎಂಬ ಚರ್ಚೆಗಳು ಹಾಗೂ ಲೆಕ್ಕಾಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.

Trending

To Top