Kannada Updates
Kannada Serials

ಹೊಸ ಅವತಾರದಲ್ಲಿ ನಾಗಿಣಿ 2

ಕಳೆದ 4 ವರ್ಷಗಳಿಂದ ಜನಪ್ರಿಯ ಧಾರಾವಾಹಿಯಾಗಿ ಪ್ರಸಾರವಾಗುತ್ತಿದ್ದ ನಾಗಿಣಿ ಇತ್ತೀಚೆಗಷ್ಟೇ ಪ್ರಸಾರವನ್ನು ನಿಲ್ಲಿಸಿತ್ತು. ಪ್ರಸಾರವಾದ ಅಷ್ಟೂ ದಿನ ಟಿಆರ್‍ಪಿ ರೇಟಿಂಗ್‍ನಲ್ಲಿದ್ದ ನಾಗಿಣಿ ಜೀ ವಾಹಿನಿ ಇನ್ನೂ ಹೆಚ್ಚು ಹೆಚ್ಚು ಜನರನ್ನು ತಲುಪುವಂತೆ ಮಾಡಿತ್ತು. ಈಗ ಅದೇ ನಾಗಿಣಿ ಹೊಸ ರೂಪದಲ್ಲಿ ಪ್ರೇಕ್ಷಕರ ಮನ ಗೆಲ್ಲೋಕೆ ಮತ್ತೊಮ್ಮೆ ವೀಕ್ಷಕರ ಮನೆಗಳಿಗೆ ಬರ್ತಿದ್ದಾಳೆ. ಅಂದರೆ ನಾಗಿಣಿ ಭಾಗ 2 ಆರಂಭವಾಗುತಿದೆ.

ಹೌದು, ಇದೇ ಸೋಮವಾರದಿಂದ ಪ್ರತಿ ರಾತ್ರಿ 9 ಗಂಟೆಗೆ ನಾಗಿಣಿಯ ಹೊಸ ಆರ್ಭಟವನ್ನು ಕರ್ನಾಟಕದ ಜನತೆ ಕಣ್ತುಂಬಿಕೊಳ್ಳಲಿದ್ದಾರೆ. ನಾಗಿಣಿ ಭಾಗ ಒಂದರಲ್ಲಿದ್ದ ಗ್ರಾಫಿಕ್ಸ್ ವೈಭವ ಇಲ್ಲಿ ದುಪ್ಪಟ್ಟಾಗುತ್ತಿದೆ. ಕನ್ನಡದಲ್ಲಿ ಇದೇ ಮೊದಲಬಾರಿಗೆ ಅದ್ದೂರಿ ಗ್ರಾಫಿಕ್ಸ್‍ನ ಕೈಚಳಕವನ್ನು ಇಲ್ಲ ಕಾಣನಹುದಾಗಿದೆ. ಈಗಾಗಲೇ ಪ್ರಸಾರವಾಗುತ್ತಿರುವ ಪ್ರೊಮೋಗಳಲ್ಲಿ ಇದು ಕಾಣುತ್ತಿದೆ. ಕಿರುತೆರೆಯಿಂದಲೇ ಫೇಮಸ್ ಆದ ನಟ ಜಯರಾಮ್ ಕಾರ್ತಿಕ್(ಜೆಕೆ) ಈ ಭಾಗದ ಪ್ರಮುಖ ಆಕರ್ಷಣೆ. ಇವರ ಜೊತೆ ಹಿರಿತೆರೆಯ ನಟ, ನಿರ್ದೇಶಕ ಮೋಹನ್ ಮತ್ತೊಂದು ಆಕರ್ಷಣೆ.

ಈಗಾಗಲೇ ಕಿರುತೆರೆಯಲ್ಲಿ ಹೆಸರಾಗಿರುವ ನಮ್ರತಾ ಇಲ್ಲಿ ಹೊಸ ನಾಗಿಣಿಯಾಗಿ ಮಿಂಚಲಿದ್ದಾರೆ, ನಿನಾದ್, ಪ್ರಣವ್, ಜೆನ್ನಿಫರ್, ಸೂರ್ಯಕಿರಣ್ ಮುಂತಾದವರು ಉಳಿದ ಪಾತ್ರಗಳಲ್ಲಿದ್ದಾರೆ. ಸಿನಿಮಾ ಸ್ಟೈಲ್ ಮೇಕಿಂಗ್ ನಾಗಿಣಿ ಭಾಗ ಎರಡರ ಪ್ರಮುಖ ಆಕರ್ಷಣೆ. ಕೊಡಚಾದ್ರಿ, ಚಿಕ್ಕಮಂಗಳೂರು, ಮೂಡಬಿದ್ರೆ ಸಕಲೇಶಪುರ, ಕೋಟಿಲಿಂಗದಂಥ ಪ್ರವಾಸಿ ತಾಣಗಳಲ್ಲಿ ನಾಗಿಣಿಯ ಚಿತ್ರೀಕರಣ ನಡೆಸಲಾಗುತ್ತಿದೆ.

ಈಗಾಗಲೇ ಸುಮಾರು ಒಂದು ಕೋಟಿ ರೂ. ವೆಚ್ಚದ ಅದ್ದೂರಿಸೆಟ್ ನಾಗಿಣಿಗಾಗಿಯೇ ಸಿದ್ಧವಾಗಿದೆ. ಅಲ್ಲದೆ ಪ್ಯಾಂಟಮ್ ಕ್ಯಾಮರಾದಲ್ಲಿ ನಾಗಿಣಿಯ ಅಷ್ಟೂ ವೈಭವವನ್ನು ಸೆರೆಹಿಡಿಯಲಾಗುತ್ತಿದೆ. ಮನುಷ್ಯನ ದುರಾಸೆ, ಅಹಂಕಾರ, ದೈವದ ಬಗ್ಗೆ ಆತನಿಗಿರುವ ನಿರ್ಲಕ್ಷೆ ಹಾಗೂ ಅದರಿಂದ ಆತ ಅನುಭವಿಸುವ ನೋವು, ನಿರಾಸೆಗಳನ್ನು ಹೇಳೋ ಪ್ರಯತ್ನವನ್ನ ನಾಗಿಣಿ-2ರ ಮೂಲಕ ಹೇಳಲಾಗುತ್ತಿದೆ.

ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಅದಕ್ಕೆ ಈಗಿನ ಕಾಲಘಟ್ಟದ ನೈಜ ದೃಶ್ಯಗಳನ್ನು ಹೆಣೆದು ಪ್ರೇಕ್ಷಕರ ಮುಂದಿಡಲಿ ದ್ದೆವೆ. ಯಾವುದೇ ಮೂಡನಂಬಿಕೆಗಳನ್ನು ಪ್ರೋತ್ಸಾಹಿಸದೆ, ಕೇವಲ ಮನರಂಜನೆಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಇಡೀ ಧಾರಾವಾಹಿಯನ್ನು ರೂಪಿಸಲಾಗಿದೆ. ತನ್ನವರನ್ನು ನಾಗಮಣಿಯ ದುರಾಸೆಯಿಂದ ಕಳೆದುಕೊಂಡ ನಾಗಿಣಿ, ನಾಗಲೋಕದಿಂದ ಭೂಮಿಗೆ ಬಂದು ಸೇಡು ತೀರಿಸಿಕೊಳ್ಳುವ ತೀರ್ಮಾನ ತೆಗೆದುಕೊಳ್ಳುತ್ತಾಳೆ.

Related posts

ತಂದೆಯಾದ ಸಂಭ್ರಮದಲ್ಲಿ ವಿಜಯ್ ಸೂರ್ಯ!

Pooja Siddaraj

ಜೊತೆ ಜೊತೆಯಲಿ ಅನು ಸಿರಿಮನೆ – ಮೇಘಾ ಶೆಟ್ಟಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

webadmin

ಟಿಆರ್ ಪಿಯಲ್ಲಿ ಟಾಪ್ : ಸಕ್ಸಸ್ ಸೆಲಬ್ರೇಟ್ ಮಾಡಿದ ಜೊತೆಜೊತೆಯಲಿ ತಂಡ

Pooja Siddaraj

‘ಜೊತೆ ಜೊತೆಯಲಿ’ ಧಾರಾವಾಹಿಗೆ ಹಿನ್ನಡೆ !

Pooja Siddaraj

ಮೊದಲ ಬಾರಿಗೆ ಜೊತೆ ಜೊತೆಯಲಿ ಆಫರ್ ತಿರಸ್ಕರಿಸಿದ್ದೇಕೆ ಮೇಘಾ ಶೆಟ್ಟಿ ?

Pooja Siddaraj

ಜೊತೆಜೊತೆಯಲಿ ಅನು – ಮೇಘಾ ಶೆಟ್ಟಿ ಅವರ ಎಲ್ಲೂ ನೋ#ಡಿರದ ಕಾಲೇಜಿನ ಅಪರೂಪದ ಫೋಟೋಗಳನ್ನು ನೋಡಿ!

webadmin

ಗಟ್ಟಿಮೇಳ ಧಾರಾವಾಹಿಯ ಆರತಿ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

webadmin

ಸಿಲ್ಲಿ ಲಲ್ಲಿ ಖ್ಯಾತಿಯ NML ನಮಿತಾ ರಾವ್, ಈಗ ಎಲ್ಲಿದ್ದಾರೆ, ಹೇಗ್ ಇದ್ದಾರೆ, ಏನು ಮಾಡ್ತಾ ಇದ್ದಾರೆ ನೋಡಿ!

webadmin

ಜೊತೆ ಜೊತೆಯಲಿ ಧಾರಾವಾಹಿಯ ಒಂದು ಎಪಿಸೋಡ್ ಗೆ ಅನಿರುದ್ಧ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Pooja Siddaraj

ಲಂಡನ್ನಿಗೆ ಹೋಗುತ್ತೇನೆಂದು ನಟ ಅನಿರುದ್ಧ್ ಹೋಗಿದ್ದು ಎಲ್ಲಿಗೆ ?

Pooja Siddaraj

ನಿಜ ಜೀವನದಲ್ಲೂ ಪ್ರೀತಿಸುತ್ತಿದ್ದಾರಾ ರಾಧಾ ಕೃಷ್ಣ ಜೋಡಿ ಸುಮೇಧ್-ಮಲ್ಲಿಕ! ಇಲ್ಲಿದೆ ಅಸಲಿ ಸತ್ಯ

webadmin

ಕನ್ನಡ ನಟ ನಟಿಯರ ಡ್ರ#ಗ್ ಸೇ#ವನೆ ಬಗ್ಗೆ ಧಾರಾವಾಹಿ ನಟಿ ರೇಖಾ ಹೇಳಿದ್ದೇನು ಗೊತ್ತಾ! ವಿಡಿಯೋ ನೋಡಿ

webadmin