Karnataka

ಹೇಗಿದೆ ಗೊತ್ತಾ ಬಾಕ್ಸಾಫಿಸ್‍ನಲ್ಲಿ ಡಿಬಾಸ್ ಹವಾ: ಗಳಿಕೆಯಲ್ಲಿ ಹುಲಿಯಾ, ಇವನು ಸ್ಯಾಂಡಲ್‍ವುಡ್ ಒಡೆಯ !

ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್ ನಟಿಸಿರುವ ಒಡೆಯ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಮೂರನೇ ದಿನವೂ ‘ಒಡೆಯ’ನ ನಾಗಾಲೋಟ ಮುಂದುವರೆದಿದೆ. ಮೊದಲ ಎರಡು ದಿನಗಳಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿಕೊಂಡಿದ್ದಾನೆ. ಹಾಗಾದ್ರೆ ಮೂರು ದಿನಗಳಲ್ಲಿ ಒಡೆಯನ ಗಳಿಕೆ ಎಷ್ಟು ಗೊತ್ತಾ..?
ಡಿಬಾಸ್ ‘ಒಡೆಯ’. ಈ ವರ್ಷ ರಿಲೀಸ್ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ನಾಲ್ಕನೇ ಚಿತ್ರ. ನಾಯಕನಾಗಿ ಅಬ್ಬರಿಸಿರುವ ಮೂರನೇ ಸಿನಿಮಾ. ಹೀಗಾಗಿಯೇ ಮೊದಲಿಂದಲೂ ‘ಒಡೆಯ’ ಸಿನಿಮಾದ ಬಗ್ಗೆ ಎಲ್ಲಿಲ್ಲದ ಕುತೂಹಲ ಹಾಗೂ ನಿರೀಕ್ಷೆಗಳಿದ್ದವು. ಇದೇ ಗುರುವಾರ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಿರುವ ‘ಒಡೆಯ’, ಪ್ರೇಕ್ಷಕರಿಗೆ ಫುಲ್‍ ಮನರಂಜನೆ ನೀಡಿದ್ದು, ಸಿನಿಪ್ರಿಯರ ಮನ ಗೆದ್ದಿದ್ದಾನೆ. ವಿಮರ್ಶಕರೂ ಬೆನ್ನು ತಟ್ಟುವಂತೆ ಮಾಡಿದ್ದಾನೆ ಹಾಗೂ ಬಾಕ್ಸಾಫಿಸ್‍ನಲ್ಲೂ ಭರ್ಜರಿ ಗಳಿಕೆ ಮಾಡಿಕೊಂಡಿದ್ದಾನೆ.

ದರ್ಶನ್

ಈ ವರ್ಷ ನಟ ದರ್ಶನ್ ಬ್ಯಾಕ್ ಟು ಬ್ಯಾಕ್ ಹಿಟ್‍ಗಳನ್ನು ನೀಡಿದ್ದಾರೆ. ಮೊದಲು ತೆರೆಗೆ ಬಂದ ‘ಯಜಮಾನ’ ಮೊದಲ ದಿನವೇ 6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಂಡಿತ್ತು. ಆ ಬಳಿಕ ರಿಲೀಸ್ ಆದ ‘ಕುರುಕ್ಷೇತ್ರ’ 9 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈಗ ‘ಒಡೆಯ’ನ ಅಬ್ಬರ ಶುರುವಾಗಿದೆ. ‘ಯಜಮಾನ’ ಹಾಗೂ ‘ಕುರುಕ್ಷೇತ್ರ’ದಷ್ಟು ದಾಖಲೆ ಗಳಿಕೆ ಇಲ್ಲದಿದ್ದರೂ, ಆ ಸಿನಿಮಾಗಳಿಗಿಂತ ಕಡಿಮೆ ಬಜೆಟ್‍ನಲ್ಲಿ ನಿರ್ಮಾಣವಾಗಿರುವ ಕಾರಣ, ‘ಒಡೆಯ’ ನಿರ್ಮಾಪಕರು ಫುಲ್ ಸಂಭ್ರಮದಲ್ಲಿದ್ದಾರೆ.

ಹೌದು, ಮೂಲಗಳ ಪ್ರಕಾರ ಒಡೆಯ ಮೊದಲ ದಿನದ ಕಲೆಕ್ಷನ್ 15 ಕೋಟಿ ಅನ್ನೋ ಸುದ್ದಿ ಹಬ್ಬಿತ್ತು. ಅದು 7 ಕೋಟಿ ರೂಪಾಯಿ ಅಂತ ಕಲೆಕ್ಷನ್ ಮೊತ್ತ ಬದಲಿಸಲಾಗಿತ್ತು. ಆದರೆ ಈಗ ಬಂದಿರುವ ಬಹುತೇಕ ಅಧಿಕೃತ ಮಾಹಿತಿಯ ಪ್ರಕಾರ ‘ಒಡೆಯ’ ಮೊದಲ ದಿನದ ಗಳಿಕೆ 3 ಕೋಟಿ ರೂಪಾಯಿ ಎನ್ನಲಾಗಿದೆ.

‘ಒಡೆಯ’ ಚಿತ್ರದ ಎರಡನೇ ದಿನದ ಕಲೆಕ್ಷನ್ ನಾಲ್ಕು ಕೋಟಿ ರೂಪಾಯಿ ದಾಟಿದೆ. ಇನ್ನು ಶನಿವಾರವೂ ಪ್ರೇಕ್ಷಕರ ಪಾಲಿಗೆ ಸಿನಿವಾರವಾಗಿದ್ದು, ಒಡೆಯನನ್ನು ನೋಡಲು ಮುಗಿಬಿದ್ದಿದ್ದಾರೆ. ಪರಿಣಾಮ ಮೂರನೇ ದಿನ ಒಡೆಯನ ಗಳಿಕೆ ಐದು ಕೋಟಿಯಾಗಿದೆ ಎನ್ನಲಾಗಿದೆ. ಭಾನುವಾರವೂ ‘ಒಡೆಯ’ನ ಸಕ್ಸಸ್‍ಫುಲ್ ಓಟ ಮುಂದುವರೆಯಲಿದ್ದು, ಮೊದಲ ಮೂರು ದಿನಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿಕೊಂಡರೂ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ ಸ್ಯಾಂಡಲ್‍ವುಡ್ ಸಿನಿಪಂಡಿತರು.

ಹೀಗೆ ಮೂರು ದಿನಗಳಿಂದ ‘ಒಡೆಯ’ 12 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಭಾನುವಾರದ ಗಳಿಕೆ ಸೇರಿದರೆ 18 ಕೋಟಿ ಆಗುವ ನಿರೀಕ್ಷೆಯಿದೆ. ಇನ್ನು ಪ್ರೀಬುಕ್ಕಿಂಗ್‍ನಿಂದ ಈಗಾಗಲೇ 3 ಕೋಟಿ ರೂಪಾಯಿ ಮೌಲ್ಯದ ಟಿಕೆಟ್ ಸೇಲಾಗಿದ್ದು, ಒಟ್ಟು ಗಳಿಕೆ 20 ಕೋಟಿ ದಾಟಿದಂತಾಗುತ್ತೆ.

‘ಒಡೆಯ’ನ ಬಾಕ್ಸಾಫಿಸ್ ಓಟ ಇದೇ ವೇಗದಲ್ಲಿ ಸಾಗಿದ್ರೆ, ಮೊದಲ ವಾರಾಂತ್ಯಕ್ಕೆ ಮೂವತ್ತು ಕೋಟಿ ಮುಟ್ಟಿದ್ರೂ ಆಶ್ಚರ್ಯವಿಲ್ಲ. ಶುಕ್ರವಾರವೇ ಡಿಬಾಸ್ ದರ್ಶನ್ ತಾಯಿ ಮೀನಾ ತೂಗುದೀಪ ‘ಒಡೆಯ’ನನ್ನು ವೀಕ್ಷಿಸಿ, ಮೆಚ್ಚಿಕೊಂಡಿದ್ದಾರೆ. ಜೊತೆಗೆ ಒಂದೊಳ್ಳೆ ಸಿನಿಮಾ ಮಾಡಿದ್ದೀರಾ ಅಂತ ಚಿತ್ರತಂಡಕ್ಕೂ ಶುಭಹಾರೈಸಿದ್ದಾರೆ. ಒಟ್ಟಾರೆ ‘ಒಡೆಯ’ನ ಓಟ ಥಿಯೇಟರ್ಗಳಲ್ಲಿ ಭರ್ಜರಿಯಾಗೇ ಸಾಗಿದೆ.

Trending

To Top