Kannada Reality Shows

ಹುಟ್ಟು ಹಬ್ಬದ ಸಂಭ್ರಮದಲ್ಲಿ ದೀಪಿಕಾ ದಾಸ್!

ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡ ಮೋಹಕ ಚೆಲುವೆ ದೀಪಿಕಾ ದಾಸ್ ಗೆ ಇಂದು ಜನುಮ ದಿನದ ಸಂಭ್ರಮ. ಬಿಗ್ ಬಾಸ್ ನಲ್ಲಿ ಟಾಪ್ 4 ಸ್ಥಾನಕ್ಕೆ ಬಂದಿದ್ದ ಚೆಂದುಳ್ಳಿ ಚೆಲುವೆ ದೀಪಿಕಾ ಬಿಗ್ ಬಾಸ್ ಮೂಲಕ ಪ್ರೇಕ್ಷಕರಿಗೆ ಮಗದಷ್ಟು ಹತ್ತಿರವಾಗತೊಡಗಿದರು.

ಹಯವದನ ನಿರ್ದೇಶನದ ಜನಪ್ರಿಯ ಧಾರಾವಾಹಿ ನಾಗಿಣಿಯಲ್ಲಿ ನಾಗಲೋಕದ ಚೆಲುವೆ ಅಮೃತಳಾಗಿ ನಟಿಸಿ ಸೈ ಎನಿಸಿಕೊಂಡ ಮುದ್ದು ಮುಖದ ಚೆಲುವೆ ಶಾಲಾ ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಂದು ಕೈ ಮುಂದು!

ನಾಗಿಣಿ ಧಾರಾವಾಹಿಯ ಅಮೃತಾಳಾಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ದೀಪಿಕಾ ದೂದ್ ಸಾಗರ್, ಡ್ರೀಮ್ ಗರ್ಲ್ಸ್ ಸೇರಿದಂತೆ ಎಂಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಬಂದ ಅವಕಾಶಗಳಿಗೆಲ್ಲಾ ಅಸ್ತು ಎನ್ನದ ದೀಪಿಕಾ ದಾಸ್ ಪಾತ್ರಗಳ ಆಯ್ಕೆಯಲ್ಲಿ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ.

Trending

To Top