Film News

ಹುಟ್ಟುಹಬ್ಬದಂದು ಬಿಡುಗಡೆಯಾಯ್ತು ಅಣ್ಣಾವ್ರ ಮೊಮ್ಮಗನ ಚಿತ್ರದ ಮತ್ತೊಂದು ಹೊಸ ಲುಕ್

ಅಣ್ಣಾವ್ರ ಮೊಮ್ಮಗ, ರಾಮ್ ಕುಮಾರ್ ಮತ್ತು ಪೂರ್ಣಿಮಾ ಅವರ ಮಗ ಧೀರೇನ್ ರಾಮ್ ಕುಮಾರ್ ಅವರ ಹುಟ್ಟುಹಬ್ಬ ನಿನ್ನೆ ಇತ್ತು. ಧೀರೇನ್ ರಾಮ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ಅವರ ಮೊದಲ ಚಿತ್ರದ ಹೊಸ ಲುಕ್ ಬಿಡುಗಡೆಯಾಗಿದೆ. ಹೊಸ ಪೋಸ್ಟರ್ ನಲ್ಲಿ ಧೀರೇನ್ ಸಖತ್ ರಗಡ್ ಆಗಿ ಕಾಣಿಸಿದ್ದಾರೆ.

ಶಿವ143 ಚಿತ್ರದ ಹೊಸ ಪೋಸ್ಟರ್

ಈ ಹಿಂದೆ ಧೀರೇನ್ ಅವರ ಮೊದಲ ಚಿತ್ರಕ್ಕೆ ‘ದಾರಿ ತಪ್ಪಿದ ಮಗ’ ಎಂದು ಹೆಸರಿದಲಾಗಿತ್ತು, ನಂತರ ಈ ಚಿತ್ರದ ಹೆಸರನ್ನು ‘ಶಿವ143’ ಎಂದು ಬದಲಿಸಲಾಗಿದೆ. ಹೊಸ ಪೋಸ್ಟರ್ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಶಿವ143 ಚಿತ್ರದ ಹೊಸ ಪೋಸ್ಟರ್

ಅಣ್ಣಾವ್ರ ಮೊಮ್ಮಗ ತುಂಬಾ ಶ್ರದ್ಧೆಯಿಂದ ಕೆಲಸ ಕಲಿಯುತ್ತಿದ್ದಾರೆ. ಚಿತ್ರದ ಕೆಲವು ದೃಶ್ಯಗಳಿಗೆ ಬೇಸ್ ವಾಯ್ಸ್ ಅಗತ್ಯವಿದ್ದು, ಇದಕ್ಕಾಗಿ ಬೆಳಿಗ್ಗೆಯೇ ಸ್ಟುಡಿಯೋಗೆ ಬರಲು ನಿರ್ದೇಶಕರು ಹೇಳಿದ್ದಕ್ಕೆ , ಧೀರೇನ್ , ಬೆಳಿಗ್ಗೆ ಹಲ್ಲುಜ್ಜದೆಯೇ ಸೃಡಿಯೋ ಗೆ ಬಂದು ಕುಳಿತಿದ್ದರಂತೆ.

Trending

To Top