Film News

ಹುಟ್ಟುಹಬ್ಬದಂದು ದರ್ಶನ್ ನೋಡಲು ಬಂದ ವಿಶೇಷ ಅಭಿಮಾನಿ

ಇವತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಚಿಕ್ಕಂದಿನಿಂದ ದರ್ಶನ್ ಅಭಿಮಾನಿಯಾಗಿರೋ ಜಾಲಹಳ್ಳಿ ಕ್ರಾಸ್‌ನ ಅಭಿಮಾನಿ ಶೋಭನಾ ವಿಶೇಷ ಚೇತನರಾಗಿದ್ರೂ ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಹಾಜರಿ ಆಗ್ತಾರೆ. ಈ ವರ್ಷವೂ ಭೇಟಿ ಆದ ಶೋಭನಾರನ್ನು ದರ್ಶನ್ ಪ್ರೀತಿಯಿಂದ ಮಾತನಾಡಿಸಿ.. ಭಾನುವಾರದ ಸ್ಪೆಷಲ್ ತರಲಿಲ್ವಾ ಅಂತಾ ಕೇಳಿದ್ದಾರೆ. ಕಳೆದ ವರ್ಷ ದರ್ಶನ್ ಹುಟ್ಟಹಬ್ಬಕ್ಕೆ ದವಸ ಧಾನ್ಯವನ್ನು ಶೋಭನಾ ತಂದು ಕೊಟ್ಟಿದ್ದರು.

ಈ ಘಟನೆ ನಿಜಕ್ಕೂ ನೆರೆದಿದ್ದ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತು. ದರ್ಶನ್ ಇಷ್ಟು ಜನರ ನಡುವೆ ಎಲ್ರನ್ನೂ ಎಷ್ಟು ಚೆನ್ನಾಗಿ ನೆನಪಿಟ್ಟುಕೊಳ್ತಾರೆ ಅಂತಾ ಆಶ್ಚರ್ಯಪಟ್ರು. ಇದು ಆ ವಿಶೇಷ ಅಭಿಮಾನಿಗೂ ಎಲ್ಲಿಲ್ಲದ ಖುಷಿ ತಂದುಕೊಡ್ತು.

Trending

To Top