Film News

ಹಿರಿಯನಟಿ ಮಾಲಾಶ್ರೀ ಅವರ ಪತಿ ನಿರ್ಮಾಪಕ ರಾಮು ಇನ್ನಿಲ್ಲ !

ದೇಶದಲ್ಲಿ ಕೊರೋನ ಅಟ್ಟಹಾಸ ನಿಂತಿಲ್ಲ, ರಾಜ್ಯದಲ್ಲಿ ಕೂಡ ಪರಿಸ್ಥಿತಿ ಬಿಗಡಾಯಿಸಿದೆ.ಅನೇಕ ಉತ್ತಮ ಆಪ್ತರನ್ನ ಕಳೆದುಕೊಳ್ಳುತ್ತಿದ್ದಾರೆ.ಈಗ ನಾಡಿನ ಜನರಿಗೆ ಒಂದು ಆಘಾತಕಾರಿ ಸುದ್ದಿ ಹೊರ ಬಂದಿದೆ.

ಕನ್ನಡ ಚಿತ್ರರಂಗದಲ್ಲಿ ಕನಸಿನ ರಾಣಿ ಎಂದೇ ಬಿರುದನ್ನು ಪಡೆದಿರುವ ಮಾಲಾಶ್ರೀ ಅವರ ಜೀವನಕ್ಕೂ ಕೂಡ ಕೊರೋನ ಒಂದು ಆಘಾತವನ್ನೇ ನೀಡಿದೆ.ಮಾಲಾಶ್ರೀ ಅವರ ಪತಿ ಸ್ಯಾಂಡಲ್ವುಡ್ ನ ಪ್ರಖ್ಯಾತ ನಿರ್ಮಾಪಕ ಆಗಿರುವ ರಾಮು ಅವರು ಕೊರೋನದಿಂದ ನಿಧನರಾಗಿದ್ದಾರೆ.

ರಾಮು ಅವರು ತಮಗೆ ಉಸಿರಾಟದ ತೊಂದರೆಯಾದ ಕಾರಣದಿಂದ ಮೂರು ದಿನಗಳ ಹಿಂದೆ ಅವರು ಎಂ ಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿ ಅಲ್ಲೇ ಅವರು ಚಿಕಿತ್ಯೆಯನ್ನ ಪಡೆಯುತ್ತಿದ್ದರು ಎನ್ನಲಾಗಿದೆ.ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.ಸ್ಯಾಂಡಲ್ವುಡ್ ನಲ್ಲಿ ಕೋಟಿ ರಾಮು ಎಂದೇ ಹೆಸರು ಪಡೆದಿದ್ದ ಅವರ ಅಗಲಿಕೆಯು ಸ್ಯಾಂಡಲ್ವುಡ್ ಗೆ ಒಂದು ತುಂಬಲಾರದ ನಷ್ಟವಾಗಿದ್ದು, ನಟಿ ಮಾಲಾಶ್ರೀ ಮತ್ತೆ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನ ಆ ದೇವರು ನೀಡಲಿ ಎಂದು ಪ್ರಾರ್ಥಿಸೋಣ.

Trending

To Top