Film News

‘ಹಿಂದಿಗಿಂತಲೂ ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ’ :- ಸೋನು ನಿಗಮ್!

ತಾನು ಹಿಂದಿನ ಜನ್ಮದಲ್ಲಿ ಇಲ್ಲಿಯೇ ಹುಟ್ಟಿದ್ದೆ, ಕನ್ನಡಿಗನೇ ಆಗಿದ್ದೇ ಎಂದು ಬಲವಾಗಿ ನಂಬಿದ್ದೇನೆ ಎಂದು ಖ್ಯಾತ ಗಾಯಕ ಸೋನು ನಿಗಮ್ ಹೇಳಿದ್ದಾರೆ.

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಸೋನು ನಿಗಮ್, ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನೇ ಆಗಿದ್ದೆ ಎಂದು ನಾನು ಬಲವಾಗಿ ನಂಬಿದ್ದೇನೆ. ಏಕೆಂದರೆ ಹಿಂದಿ ಹಾಡು ಹಾಡಲು ನಾನು ಬಂದೆ. ಆದರೆ, ಹಿಂದಿಗಿಂತಲೂ ಉತ್ತಮ ಹಾಗು ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ಕನ್ನಡದ ಜನರ ಬಗ್ಗೆ ತುಂಬ ಗೌರವವಿದೆ. ನಿಮ್ಮ ಪ್ರೀತಿ ಪಡೆಯಲು ತನಗೆ ಹೆಮ್ಮೆ ಆಗುತ್ತಿದೆ ಎಂದು ಸೋನು ನಿಗಮ್ ಹೇಳಿದರು.

ದುಬೈ, ಆಸ್ಪ್ರೇಲಿಯಾ, ಅಮೆರಿಕ ಹೀಗೆ ಹಲವು ದೇಶಗಳಲ್ಲಿ ಕಾರ್ಯಕ್ರಮ ಕೊಡುತ್ತೇನೆ. ಯಾವ ದೇಶದಲ್ಲಿಯೇ ಆಗಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರೂ ಅಲ್ಲಿ ಒಂದು ಕನ್ನಡ ಎಂದು ಧ್ವನಿ ಕೇಳುತ್ತದೆ.

ಆಗ ನಾನು ಅನುಸುತ್ತಿದೆ ಯಾಕೋ ಇಂದು ಎಂದು ಹಾಡುತ್ತೇನೆ ಎಂದು ಹೇಳಿದರು. ಅಲ್ಲದೆ ವೇದಿಕೆಯಲ್ಲಿ ಸೋನು ನಿಗಮ್ ಮುಂಗಾರು ಮಳೆ ಚಿತ್ರದ ಅನಿಸುತ್ತಿದೆ ಯಾಕೋ ಇಂದು ಎಂಬ ಹಾಡನ್ನು ಈ ವೇಳೆ ಹಾಡಿದರು.

Trending

To Top