ಆನಂತರ ಬಂದ ಹರೀಶ್ ರಾಜ್ ಬಿಗ್ ಬಾಸ್ ಬಗ್ಗೆ ಮಾತನಾಡಿದರು. ಮೊದಲನೆಯದಾಗಿ ಸುದೀಪ್ ಅವರನ್ನು ಭೇಟಿ ಆಗಿದ್ದು, ಬಿಗ್ ಬಾಸ್ನ ಸುದೀಪ್ ಅವರ ಎಪಿಸೋಡ್ಗಳನ್ನು ಮಾತ್ರ ನೋಡಿದ್ದೆ. ಬಿಗ್ ಬಾಸ್ ನೋಡಿರಲಿಲ್ಲ. ಬಿಗ್ ಬಾಸ್ ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿದೆ. ಈ ಟಾಸ್ಕ್ಗಳು ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿವೆ. ಬಿಗ್ ಬಾಸ್ 98 ದಿನಗಳು ಇರುತ್ತದೆ ಎಂದುಕೊಂಡು ಬಂದೆ. ಆದರೆ 100 ದಿನಕ್ಕೂ ಹೆಚ್ಚಾಯಿತು ಎಂದು ಹರೀಶ್ ರಾಜ್ ಕ್ರೇನ್ನಲ್ಲಿ ಇರಬೇಕಾದರೆ ಹೇಳಿದರು. ಬಳಿಕ ತಮ್ಮ ಬೋರ್ಡಿಂಗ್ ಪಾಸ್ ಸ್ವೈಪ್ ಮಾಡಿದಾಗ ಅವರ ಅದೃಷ್ಟ ಕೈಕೊಟ್ಟಿತ್ತು, ಕೆಂಪು ದೀಪ ಬೆಳಗುವ ಮೂಲಕ ಅವರು ಮಿಡ್ ವೀಕ್ ಎಲಿಮಿನೇಷನ್ಗೆ ಬಲಿಯಾಗಿದ್ದರು. ಅಲ್ಲಿಂದ ಕ್ರೇನ್ ಮೂಲಕ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಇನ್ನೇನಿದ್ದರೂ ಅವರು ಫಿನಾಲೆ ದಿನ ಸುದೀಪ್ ಅವರೊಂದಿಗೆ ಮಾತ್ರ ಕಾಣಿಸಿಕೊಳ್ಳುತ್ತಾರೆ. ಕ್ರೇನ್ನಲ್ಲಿ ಹೊರಡುತ್ತಾ ಇಲ್ಲಿಂದ ಅದ್ಭುತವಾದ ಅನುಭವವನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. 17 ಜನ ಸ್ನೇಹಿತರು ಸಿಕ್ಕಿದ್ದಾರೆ ಎಂದು ಹರೀಶ್ ಹೇಳಿದ್ದಾರೆ.
