Kannada Reality Shows

ಹರೀಶ್‌-ವಾಸುಕಿ ಜಗಳ ಬಿಡಿಸಲು ಯಾರು ಬರಲಿಲ್ಲ ಯಾಕೆ? ಇದು ಸ್ಟ್ರಾಟಜಿನಾ?

ಬಿಗ್‌ಬಾಸ್‌ ಮನೆಯಲ್ಲಿ ಹರೀಶ್‌ ರಾಜ್‌ ಮತ್ತು ವಾಸುಕಿ ವೈಭವ್ ನಡುವೆ ಹಲವು ದಿನಗಳಿಂದ ಕೋಲ್ಡ್‌ ವಾರ್ ನಡೆಯುತ್ತಿತ್ತು. ಇದು ವೀಕೆಂಡ್‌ ಸ್ಪೆಷಲ್‌ ಎಪಿಸೋಡ್‌ನಲ್ಲೂ ಕೆಲವೊಮ್ಮೆ ಸ್ಫೋಟವಾಗಿತ್ತು. ಆದ್ರೆ, ಪೂರ್ಣ ಪ್ರಮಾಣದಲ್ಲಿ ಇವರಿಬ್ಬರು ವರ್ಬಲ್‌ ವಾರ್‌ ನಡೆಸಿದ್ದು ಕಡಿಮೆಯೇ. ಆದ್ರೆ, ಈ ವಾರದ ಟಾಸ್ಕ್‌ನಲ್ಲಿ ಇವರಿಬ್ಬರು ಒಂದೊಂದು ತಂಡದ ಕ್ಯಾಪ್ಟನ್‌ ಆಗಿದ್ದಾರೆ. ಇದೊಂಥರಾ ಬದ್ಧವೈರಿಗಳ ನಡುವೆ ಫೈಟ್‌ ಆಗಿ ಮಾರ್ಪಟ್ಟಿದೆ. ಅಲ್ಲದೇ, ಕೋಲ್ಡ್‌ ವಾರ್ ದೊಡ್ಡದಾಗಿಯೇ ಸ್ಫೋಟಗೊಂಡಿದೆ.

ಅಂದ್ಹಾಗೇ, ನಿನ್ನೆಯ ಎಪಿಸೋಡ್‌ನ ಕೊನೆಯ ಟಾಸ್ಕ್‌ ಸಖತ್‌ ಇಂಟರೆಸ್ಟಿಂಗ್ ಆಗಿತ್ತು. ರೂಬಿಕ್ಸ್‌ ಕ್ಯೂಬ್ಸ್‌ ನ ತಂಡಗಳು ಬಚ್ಚಿಡಬೇಕಿತ್ತು. ಆ ನಂತರ ರೂಬಿಕ್ಸ್‌ ಕ್ಯೂಬ್ಸ್‌ನ ಸರ್ಜ್‌ ಮಾಡಬೇಕಿತ್ತು. ಈ ವೇಳೆ ವಾಶ್‌ರೂಮ್‌ನಲ್ಲಿ ಹರೀಶ್‌ ರಾಜ್ ನಿಂತುಕೊಂಡಿದ್ದಾಗ ವಾಸುಕಿ ಒಳಗೆ ಹೋಗುವ ಪ್ರಯತ್ನ ಮಾಡಿದರು.

ಈ ವೇಳೆ ಹರೀಶ್ ರಾಜ್‌ ವಾಸುಕಿಯನ್ನ ತಳ್ಳಿದರು ಅಷ್ಟೇ. ಅಲ್ಲಿಂದ ಶುರುವಾಯ್ತು ನೋಡಿ ಟಾಕ್ ಫೈಟ್‌.

ಹರೀಶ್ ರಾಜ್‌ ಮತ್ತು ವಾಸುಕಿ ಕಮ್ಮಿ ಅಂದರೂ 15 ನಿಮಿಷ ಜಗಳವಾಡಿದರು. ಅವರ ಬಗ್ಗೆ ಇವರು, ಇವರ ಬಗ್ಗೆ ಅವರು ಕೆಸರು ಎರಚಿಕೊಂಡರು. ಹರೀಶ್‌ ರಾಜ್‌ ವಾಸುಕಿಗೆ ನಿಮ್ಮ ನಿಜ ಬಣ್ಣ ಬಯಲಾಯ್ತು ಅಂತಾ ಗುಡುಗಿದರು. ವಾಸುಕಿ ಕೂಡ ಹರೀಶ್‌ ರಾಜ್‌ಗೆ ಕೌಂಟರ್‌ ಕೊಟ್ಟರು. ಕೊನೆಗೆ ಇವರಿಬ್ಬರ ಜಗಳಕ್ಕೆ ಅವರೇ ಫುಲ್‌ ಸ್ಟಾಪ್‌ ಇಟ್ಟುಕೊಂಡರು. ಯಾರು ಕೂಡ ಇವರಿಬ್ಬರ ಮಧ್ಯೆ ಬರಲಿಲ್ಲ. ಕ್ಯಾಪ್ಟನ್‌ ಶೈನ್‌ ಕೂಡ. ಯಾಕೆ ಅಂತಾ ಯಾರಿಗೂ ಅರ್ಥವಾಗಲೇ ಇಲ್ಲ.

Trending

To Top