Karnataka

ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿ ಬರುತ್ತಿರುವ ಚಂದನ್-ನಿವೇದಿತಾಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ಆಗಲೇಬೇಕೆಂದು NSUI ಆಗ್ರಹ!

ಹನಿಮೂನ್ ಗೆ ವಿದೇಶಕ್ಕೆ ಹೋಗಿಬಂದಿದ್ದ’BIGGBOSS’ ಜೋಡಿ, ನವ ದಂಪತಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಗೂ ಕೊರೊನಾ ಬಿಸಿ ತಟ್ಟಿದೆ

ಹೌದು, ಚಂದನ್ ಹಾಗೂ ನಿವೇದಿತಾ ಗೌಡರಿಗೆ ಕಡ್ಡಾಯವಾಗಿ ಕೊರೊನಾ ತಪಾಸಣೆಗೆ ಒಳಪಡಿಸುವಂತೆ ಮೈಸೂರು ಜಿಲ್ಲಾಧಿಕಾರಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾ ಸಂಘಟನೆ ಮನವಿ ಮಾಡಿದೆ. ಈ ಮೂಲಕ ಇಬ್ಬರಿಗೂ ಕೊರೊನಾ ಬಿಸಿ ತಟ್ಟಿದೆ.

ಮದುವೆ ಬಳಿಕ ಚಂದನ್ ನಿವೇದಿತಾ ಜೋಡಿ ಹನಿಮೂನ್ ಗೆ ನೆದರ್ ಲೆಂಡ್ ಇಟಲಿಗೆ ಹೋಗಿದ್ದಾರೆ. ಅವರು ಮೈಸೂರಿಗೆ ಆಗಮಿಸುವ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಎಂಬ ಕಾರಣಕ್ಕೆ ಅವರನ್ನು ತಪಾಸಣೆ ಮಾಡದೇ ನಿರ್ಲಕ್ಷ ಮಾಡಬಾರದು.

ಇತ್ತೀಚೆಗಷ್ಟೇ ಚಂದನ್ ಹಾಗೂ ನಿವೇದಿತಾ ಜೋಡಿಗೆ ‘ಕೊರೊನಾ ಪರೀಕ್ಷೆ ಮಾಡಿಸಿ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿದೇಶಕ್ಕೆ ಹಾರಿದ್ದರು. ವಿದೇಶಕ್ಕೆ ತೆರಳಿ ವಾಪಸ್ ಆಗಿರುವ ನವದಂಪತಿಗಳಿಗೆ ಕೊರೊನಾ ಬಂದಿರಬಹುದು,,! ಪರೀಕ್ಷೆ ಮಾಡಲಾಗುತ್ತಿದಿಯಾ..? ಎಂಬ ಬಗ್ಗೆ ಕೂಡ ಚರ್ಚೆ ಮಾಡಿದ್ದರು.

Trending

To Top