Film News

ಸ್ಯಾಂಡಲ್ ವುಡ್ ನಲ್ಲಿ ಕೊರೊನಾ ಜಾಗೃತಿ ಹಾಡು ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ದೇಶದೆಲ್ಲೆಡೆ ಕೊರೊನಾ ಸೊಂಕು ಮಹಾಮಾರಿಯದ್ದೇ ಸುದ್ದಿ. ದಿನದಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗ್ತಾನೇ ಇದೆ. ಸರ್ಕಾರ ಕೂಡ ಈ ಬಗ್ಗೆ ಜಾಗೃತಿ ಮೂಡಿಸ್ತಿದೆ. ಇದೇ ಹಾದಿಯಲ್ಲಿ ಸ್ಯಾಂಡಲ್ವುಡ್ನಲ್ಲೂ ಕೂಡ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವಂತಹ ಹಾಡೊಂದು ತಯಾರಾಗಿದೆ.

ಕೊರೊನಾ ಭೀತಿಯಿಂದ ಇಡೀ ಸ್ಯಾಂಡಲ್ವುಡ್ ಸದ್ಯ ಸ್ಥಬ್ದವಾಗಿದೆ. ಸಿನಿಮಾ ಪ್ರದರ್ಶನವೂ ಇಲ್ಲ. ಸಿನಿಮಾ ಚಿತ್ರೀಕರಣವೂ ಇಲ್ಲ. ಯಾವುದೇ ಆಡಿಯೋ ಲಾಂಚ್, ಸಿನಿಮಾ ರಿಲೀಸ್ ಏನೇನು ಇಲ್ಲದೇ ಸಿನಿಮಾ ಇಂಡಸ್ಟ್ರಿ ಸೈಲೆಂಟ್ ಆಗ್ಬಿಟ್ಟಿದೆ. ಆದರೆ, ಇದರ ಮಧ್ಯದಲ್ಲಿ ಇಲ್ಲೊಂದು ಚಿತ್ರತಂಡ ಒಂದಷ್ಟು ಎಂಟರ್ಟೈನ್ ಮಾಡುತ್ತಿದೆ. ಎಂಟರ್ಟೈನ್ಮೆಂಟ್ ಮೂಲಕವೇ ಕೊರೊನ ಜಾಗೃತಿ ಮೂಡಿಸಿದೆ.

ಈ ಹಿಂದೆ ಪ್ರಜ್ವಲ್ ದೇವರಾಜ್ ಅಭಿನಯದ , ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ಹೇ ಗೈಸ್ ಕೂಲಿಂಗ್ ಗ್ಲಾಸ್ ಹಾಕೊಂಡು ಕೂಲಾಗಿರಿ ಎನ್ನೋ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿತ್ತು.
ಕೆಲ ದಿನಗಳಂತೂ ಯಂಗ್ಸ್ಟರ್ಗಳ ಆಯಂತಮ್ ಆಗಿತ್ತು. ಪ್ರಜ್ಜು ಈ ಹಾಡಿನಲ್ಲಿ ಸಖತ್ ಆಗಿ ಸ್ಟೆಪ್ ಹಾಕಿದ್ರು. ಟಿಕ್ ಟಾಕ್ನಲ್ಲಂತೂ ಈ ಹಾಡಿಗೆ ಜೋರಾಗೆ ಸೌಂಡ್ ಮಾಡಿತ್ತು. ಈ ಹಾಡಿಗೆ ಅನೂಪ್ ಸೀಳಿನ್ ಮ್ಯೂಸಿಕ್ ಮಾಡಿ ದನಿಯಾಗಿದರೆ, ಪ್ರಮೋದ್ ಮರವಂತೆ ಲಿರಿಕ್ಸ್ ಬರೆದಿದ್ದರು.

ಇದೀಗ ಇದೇ ಟ್ಯೂನ್ಗೆ ಕೊರೊನ ವರ್ಶನ್ ಸಾಂಗ್ ರೆಡಿಮಾಡಿದ್ದಾರೆ ಮ್ಯೂಸಿಕ್ ಡೈರೆಕ್ಟರ್ ಅನೂಪ್ ಸೀಳಿನ್. ಮೂಲ ಹಾಡಿಗೆ ಲಿರಿಕ್ಸ್ ಬರೆದಿದ್ದ ಪ್ರಮೋದ್ ಈ ಹಾಡಿಗೂ ಸಾಹಿತ್ಯ ಬರೆದಿದ್ದು, ಅನೂಪ್ ಸೀಳಿನ್ ಸ್ವತ: ಈ ಹಾಡನ್ನೂ ಹಾಡಿದ್ದಾರೆ. ಹೇ ಗೈಸ್ ಸೇಫ್ಟಿ ಮಾಸ್ಕ್ ಹಾಕೊಂಡು ಓಡಾಡಿರಿ ಅಂತ ಈ ಹಾಡು ಶುರುವಾಗೋದರ ಜೊತೆಗೆ ಹ್ಯಾಂಡ್ ಸ್ಯಾನಿಟೈಸರ್ ಬಳಸಿ, ಹಾಗೂ ಶೇಕ್ ಹ್ಯಾಂಡ್ ಮಾಡ್ಬೇಡಿ ಅಂತ ಕೊರೊನಾದಿಂದ ದೂರವಿರಲು ಈ ಹಾಡಿನ ಮೂಲಕ ಜಾಗೃತಿ ಮೂಡಿಸಿದ್ದಾರೆ.

ಯಾವ ಆಯಕ್ಟಿವಿಟೀಸ್ ಇಲ್ಲದೇ ಮಂಕಾಗಿದ್ದ ಸ್ಯಾಂಡಲ್ವುಡ್ ಕೊರೊನಾ ವೈರಸ್ನ್ನೇ ದಾಳವಾಗಿಟ್ಟುಕೊಂಡು ಎಂಟರ್ಟೈನ್ ಮಾಡೋದರ ಜೊತೆಗೆ ಜಾಗೃತಿ ಮೂಡಿಸೋಕ್ಕೆ ಮುಂದಾಗಿದ್ದಾರೆ.

Trending

To Top