Film News

ಸ್ಯಾಂಡಲ್ ವುಡ್ ನಟಿ ಅಮುಲ್ಯ ಮತ್ತು ಅವರ ಪತಿ ಜಗದೀಶ್ ಇಂದ ಮತ್ತೊಂದು ಒಳಿತಿನ ಕಾರ್ಯ !

ಬಾಲನಟಿಯಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪನಣೆ ಮಾಡಿ ನಂತರ ನಾಯಕಿಯಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದರು ನಟಿ ಅಮೂಲ್ಯ. ಕನ್ನಡದ ಬಹುತೇಕ ಎಲ್ಲಾ ನಟರೊಂದಿಗೂ ನಾಯಕಿಯಾಗಿ ನಟಿಸಿ ಈಗ ಮದುವೆಯಾಗಿ ತಮ್ಮ ಪತಿಯೊಂದಿಗೆ ಸಮಾಜಕ್ಕೆ ಒಳಿತಾಗುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೂಲ್ಯ ಮತ್ತು ಅವರ ಪತಿ ಜಗದೀಶ್ ವೈದ್ಯರು ಹಾಗೂ ಪೊಲೀಸರಿಗಾಗಿ 10 ಸಾವಿರ ಮಾಸ್ಕ್‌ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಹಿಂದೆ ರಾಜ್ಯದ ನೆರೆ, ಬರ ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್ ಸಂಘಟನೆ ಜತೆ ಸೇರಿ 1 ಟನ್ ಅಕ್ಕಿ ನೀಡಿದ್ದ ನಟಿ ಅಮೂಲ್ಯ ದಂಪತಿ,ಈಗ ಮತ್ತೆ ನೆರವಿಗೆ ನಿಂತಿದ್ದಾರೆ.

ತಮ್ಮ ಕಾರ್ಯದ ಬಗೆಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿರುವ ಜಗದೀಶ್ “ಲಾಕ್ ಡೌನ್ ಈ ಬಿಕ್ಕಟ್ಟಿನಲ್ಲಿ ಮಹಿಳಾ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜರಾಜೇಶ್ವರಿ ನಗರದಿಂದ 25ಕ್ಕೂ ಹೆಚ್ಚು ಟೈಲರ್‌ಗಳನ್ನು ನೇಮಿಸುವ ಮೂಲಕ ನಾವು ಪ್ರಸ್ತುತ 10000 ಮಾಸ್ಕ್ ಗಳನ್ನು ಉತ್ಪಾದಿಸುತ್ತಿದ್ದೇವೆ. ಈ ಮಾಸ್ಕ್ ಗಳನ್ನು ಅಗತ್ಯವಿರುವ ಕೊರೊನಾ ಯೋಧರಿಗೆ ನೀಡಲಾಗುವುದು” ಎಂದು ಬರೆದಿದ್ದಾರೆ.

https://www.instagram.com/p/B_PgyEMAmF5/?igshid=mtctu5d3nam9

Trending

To Top