Kannada Updates
Film News

ಸ್ಮಶಾನದಲ್ಲಿ ಸೆರೆಹಿಡಿದ ಸಲಗ ಚಿತ್ರದ ಫೋಟೋ ಸಖ್ಖತ್ ಸೌಂಡ್ ಮಾಡುತ್ತಿದೆ!

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ಆಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಈಗಾಗಲೇ ಫಸ್ಟ್ ಲುಕ್ ಟೀಸರ್ ಹಾಗೂ ಸೂರಿ ಅಣ್ಣ ಸಾಂಗ್ ಮೂಲಕ ಸ್ಯಾಂಡಲ್‍ವುಡ್ ‘ಸಲಗ’ ಸಖತ್ ಸೌಂಡ್ ಮಾಡುತ್ತಿದೆ. ಅದರ ಬೆನ್ನಲ್ಲೆ ಚಿತ್ರತಂಡ ಇತ್ತೀಚೆಗಷ್ಟೇ ರಿಯಲ್ ಸ್ಮಶಾನದಲ್ಲೇ ಶೂಟಿಂಗ್ ಮಾಡಿ ಗಮನ ಸೆಳೆದಿದೆ.

ಸ್ಮಶಾನದ ಚಿತಾಗಾರದಲ್ಲಿ ಪಾರ್ಥೀವ ಶರೀರವನ್ನು ಸುಡುತ್ತಿದ್ದರೆ, ಅದರ ಮುಂದೆ ಒಂದು ಕೈಯಲ್ಲಿ ಲಾಂಗ್ ಹಾಗೂ ಮತ್ತೊಂದು ಕೈಯಲ್ಲಿ ಮದ್ಯದ ಗ್ಲಾಸ್ ಹಿಡಿದು ನಾಯಕ ಘೀಳಿಡೋ ಸನ್ನಿವೇಶವನ್ನು ವಿಜಿ ಸೆರೆಹಿಡಿದಿದ್ದಾರೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ, ಮಳೆಬಿಲ್ಲು ಹಾಗೂ ಕುಷ್ಕ ಚಿತ್ರಗಳಲ್ಲಿ ಮಿಂಚಿರುವ ಸಂಜನಾ ಆನಂದ್, `ಸಲಗ’ದಲ್ಲಿ ದುನಿಯಾ ವಿಜಿಗೆ ನಾಯಕಿಯಾಗಿದ್ದಾರೆ. ‘ಟಗರು’ ಸಿನಿಮಾ ಸಕ್ಸಸ್ ಬಳಿಕ ನಿರ್ಮಾಪಕ ಕೆಪಿ ಶ್ರೀಕಾಂತ್ ಮತ್ತೊಂದು ರಾ ಸಬ್ಜೆಕ್ಟ್​ಗೆ ಹಣ ಹೂಡಿದ್ದಾರೆ.

‘ಟಗರು’ ಚಿತ್ರದಲ್ಲಿ ಡಾಲಿ ಪಾತ್ರದಲ್ಲಿ ಅಬ್ಬರಿಸಿದ್ದ ಸ್ಪೆಷಲ್ ಸ್ಟಾರ್ ಧನಂಜಯ, ಸಲಗ ಚಿತ್ರದಲ್ಲಿ ಖತರ್ನಾಕ್ ಪೊಲೀಸ್ ಅಧಿಕಾರಿಯಾಗಿ ಬೊಬ್ಬಿರಿದಿದ್ದಾರೆ. ಜತೆಗೆ ಟಗರು ಚಿತ್ರದ ಕಾಕ್ರೋಚ್ ಖ್ಯಾತಿಯ ಸುಧೀ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ಉಳಿದಂತೆ ಹಾಸ್ಯನಟ ರಂಗಾಯಣ ರಘು, ಅಚ್ಯುತ್ ಕುಮಾರ್, ನಾಗಭೂಷಣ್, ಯಶ್ ಶೆಟ್ಟಿ ತಾರಾಗಣದಲ್ಲಿದ್ದಾರೆ.ಸಲಗ ಚಿತ್ರಕ್ಕೆ ಸಂಗೀತ ನಿರ್ದೇಶಕ ಚರಣ್‍ರಾಜ್ ಮ್ಯೂಸಿಕ್ ಸಖತ್ ಕಿಕ್ ನೀಡಿದೆ. ಖುದ್ದು ದುನಿಯಾ ವಿಜಯ್ ಸಾಹಿತ್ಯ ಬರೆದಿರುವ ಸೂರಿ ಅಣ್ಣ ಸಾಂಗ್ ಈಗಾಗಲೇ ವೈರಲ್ ಆಗಿದ್ದು, ಸಿದ್ದಿ ಜಾನಪದ ಶೈಲಿಯಲ್ಲಿ ಮೂಡಿಬಂದಿರುವ ಟೈಟಲ್ ಸಾಂಗ್ ಮೇಕಿಂಗ್ ಕೂಡ ಸದ್ದು ಮಾಡುತ್ತಿದೆ.

Related posts

ತಮಿಳು ನಟ ಸೂರ್ಯ ಅವರ ಸಿನಿಮಾಗಳನ್ನು ಬ್ಯಾನ್ ಮಾಡುವಂತೆ ಎಚ್ಚರಿಕೆ!

Pooja Siddaraj

ಮದುವೆಗೆ ತಯಾರಾದ ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ

Pooja Siddaraj

ಕೋಟಿಗೊಬ್ಬ 3 ಟೀಸರ್ ಯೂಟ್ಯೂಬ್ ನಿಂದ ಡಿಲೀಟ್ ಆಗಿರುವ ಬಗ್ಗೆ ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟನೆ ನೀಡಿದ್ದಾರೆ!

Pooja Siddaraj

ಮೈಸೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಿದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರತಂಡ!

Pooja Siddaraj

ಗಾಳಿಪಟ 2 ಚಿತ್ರದಲ್ಲಿ ಎಕ್ಸಾಮ್ ಟೈಮ್ ಬಗ್ಗೆ ಭಟ್ಟರ ಸ್ಪೆಷಲ್ ಹಾಡು!

Pooja Siddaraj

ಕರಣ್ ಜೋಹರ್ ಮನೆಯ ಇಬ್ಬರು ನೌಕರರಿಗೆ ಕೊರೊನಾ ಪಾಸಿಟಿವ್

Pooja Siddaraj

ಹೊಸ ಲುಕ್ ನಲ್ಲಿ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್!

Pooja Siddaraj

ಲಾಕ್ ಡೌನ್ ನಂತರ ತೆರೆಕಾಣುವ ಮೊದಲ ಚಿತ್ರ ಆಗಲಿದೆ ‘ಸಲಗ’ !

Pooja Siddaraj

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕೋಟಿಗೊಬ್ಬ3 ಚಿತ್ರತಂಡದಿಂದ ಸಿಹಿಸುದ್ದಿ !

Pooja Siddaraj

ಚಿಕ್ಕಣ್ಣ ಹಾಗೂ ಶಿಶಿರ್ ನಟಿಸಿರುವ ‘ಬಿಲ್ ಗೇಟ್ಸ್’ ಇದೇ ಶುಕ್ರವಾರ ತೆರೆಕಾಣಲಿದೆ

Pooja Siddaraj

ರೇವತಿ ನಕ್ಷತ್ರ ನಿಖಿಲ್ ಲೈಫ್ ನಲ್ಲಿ ಬಂದ ನಂತರ ಅದೃಷ್ಟ ಬದಲಾಯಿಸಿದೆ .. ನಿಖಿಲ್ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎ.ಪಿ.ಅರ್ಜುನ್!

Pooja Siddaraj

Be The Real Man ಚಾಲೆಂಜ್ ಪೂರ್ಣಗೊಳಿಸಲು ಮೆಗಾ ಸ್ಟಾರ್ ಚಿರಂಜೀವಿ ಏನ್ ಮಾಡಿದ್ರು ನೋಡಿ !

Pooja Siddaraj