gossip

ಸೂಪರ್ ಸ್ಟಾರ್ ರಜನಿಕಾಂತ್ ಗೆ ಈ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ: ಯಾವುದು ಅಂತ ಗೊತ್ತಾದ್ರೆ ಅಚ್ಚರಿಯಾಗುತ್ತೆ!

ಕಲಾವಿದರುಗಳಿಗೆ ನಿರ್ದಿಷ್ಟ ಪಾತ್ರ ಮಾಡಬೇಕೆಂಬ ಇಚ್ಚೆ ತೀವ್ರವಾಗಿರುತ್ತೆ. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ನಿರ್ದಿಷ್ಟ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ ಇದೆಯಂತೆ.

ಬಹುತೇಕ ಎಲ್ಲಾ ರೀತಿಯ ಪಾತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಆದರೆ ತೃತೀಯಲಿಂಗಿ ಪಾತ್ರದಲ್ಲಿ ನಟಿಸಿಲ್ಲ. ಈ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ ಇದೆ ಎಂದು ರಜನಿಕಾಂತ್ ಹೇಳಿದ್ದಾರೆ.

45 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದು 160 ಸಿನಿಮಾಗಳಲ್ಲಿ ನಟಿಸಿದ್ದೇನೆ, ಆದರೆ ಮಂಗಳಮುಖಿ ಪಾತ್ರದಲ್ಲಿ ನಟಿಸಿಲ್ಲ. ಇದನ್ನೂ ಪ್ರಯೋಗ ಮಾಡಬೇಕೆಂಬ ಆಸೆ ಇದೆ ಎಂದಿದ್ದಾರೆ.

ತಮ್ಮ ಮುಂದಿನ ಚಿತ್ರ ದರ್ಬಾರ್ ನ ಟ್ರೈಲರ್ ಬಿಡುಗಡೇ ಕಾರ್ಯಕ್ರಮದಲ್ಲಿ ರಜನಿಕಾಂತ್ ಈ ಹೇಳಿಕೆ ನೀಡಿದ್ದಾರೆ.

ಸೂಪರ್ ಸ್ಟಾರ್ ನ ಆಸೆ ಇದಿಷ್ಟೇ ಅಲ್ಲ.

ತಮ್ಮ ಮೂಲವಾಗಿರುವ ಮರಾಠಿ ಭಾಷೆಯ ಸಿನಿಮಾಗಳಲ್ಲೂ ಸಹ ನಟಿಸಬೇಕೆಂಬ ಆಸೆ ಇದೆಯಂತೆ. “ನಾನು ಮನೆಯಲ್ಲಿ ಮರಾಠಿ ಮಾತನಾಡುತ್ತೇನೆ. ಒಮ್ಮೆ ಮಾರಾಠಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಮರಾಠಿ ಸಿನಿಮಾದಲ್ಲಿ ಅಭಿನಯಿಸುವ ಆಸೆ ಇದೆ ಏನಾಗುತ್ತದೋ ನೋಡೋಣ, ದರ್ಬಾರ್ ಸಿನಿಮಾದ ಚಿತ್ರೀಕರಣ 90 ದಿನಗಳ ಕಾಲ ಮುಂಬೈ ನಲ್ಲಿ ನಡೆದಿದೆ. ಮುಂಬೈ ನ ಜನರನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

Trending

To Top