Film News

ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಸಿನಿಮಾದ ಶೀರ್ಷಿಕೆ ‘ಅಣ್ಣಾತೆ’

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 168ನೇ ಸಿನಿಮಾದಲ್ಲಿ ಮೀನಾ, ಖುಷ್ಬೂ, ಪ್ರಕಾಶ್ ರಾಜ್ ಮುಂತಾದವರು ನಟಿಸುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ರಜನಿಕಾಂತ್ ಮಗಳ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸಹ ಸುದ್ದಿಯಾಗಿತ್ತು ಇದೀಗ ರಜನಿಕಾಂತ್ ಅವರ 168ನೆ ಚಿತ್ರದ ಶೀರ್ಷಿಕೆ ರೇವೀಲ್ ಆಗಿದೆ , ಆ ಚಿತ್ರದ ಹೆಸರು ‘ಅಣ್ಣಾತೆ’.

ಈ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಯಿತು. ‘ಅಣ್ಣಾತೆ‘ ಸಿನಿಮಾದಲ್ಲಿ ರಜನಿಕಾಂತ್​​ ಡಾನ್​ ಅಥವಾ ಪ್ರಭಾವಿ ವ್ಯಕ್ತಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹೊಸ ಅವತಾರದಲ್ಲಿ ತಲೈವಾ ರಜನಿಕಾಂತ್​ ಅವರನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

‘ವಿಶ್ವಾಸಂ‘, ‘ವೀರಂ‘, ‘ವೇದಾಳಂ‘ ಸಿನಿಮಾ ನಿರ್ದೇಶಿಸಿದ ಯಶಸ್ವಿ ನಿರ್ದೇಶಕ ಸಿರುಥೈ ಸಿವಾ ‘ಅಣ್ಣಾತೆ‘ಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಸಿವಾ ನಿರ್ದೇಶನದ ‘ವಿಶ್ವಾಸಂ‘ ಸಿನಿಮಾ ಮತ್ತು ರಜನಿಕಾಂತ್​​ ನಟನೆಯ ‘ಪೇಟಾ‘ ಸಿನಿಮಾ ಒಂದೇ ದಿನ ಬಿಡುಗಡೆಯಾಗಿ ಬಾಕ್ಸ್​ ಆಫೀಸಿನಲ್ಲಿ ಪೈಪೋಟಿ ಎದುರಿಸಿತ್ತು. ಇದೀಗ ಸಿವಾ ಸೂಪರ್​ ಸ್ಟಾರ್​ನೊಂದಿಗೆ ಕೈಜೋಡಿಸಿಕೊಂಡು ‘ಅಣ್ಣಾತೆ‘ ಸಿನಿಮಾ ಮಾಡಲು ಮುಂದಾಗಿದ್ದಾರೆ.

Trending

To Top