News

ಸೀರೆಯಲ್ಲಿ ಐಶ್ವರ್ಯ ಪುರ್ತಿ ಆರಾಧ್ಯ ನೃತ್ಯ ವೀಕ್ಷಿಸಲು ಬಂದ ಬಾಲಿವುಡ್ ದಂಡು

ಬಾಲಿವುಡ್ ನಟಿ ಐಶ್ವರ್ಯ ರೈ ಪುತ್ರಿ ಆರಾಧ್ಯ ಶಾಲೆಯ ವಾರ್ಷಿಕ ದಿನಾಚರಣೆಯಲ್ಲಿ ಸೀರೆಯಲ್ಲಿ ನೃತ್ಯ ಮಾಡಿರುವುದು ಬಾಲಿವುಡ್ ದಿಗ್ಗಜರ ಪಾಲಿಗೆ ವಿಶೇಷ ದಿನವಾಗಿದೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಶಾಲೆಯ ವಾರ್ಷಿಕ ದಿನಾಚರಣೆಯಲ್ಲಿ ಆರಾಧ್ಯ ಸೀರೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ಈ ನೃತ್ಯ ಪ್ರದರ್ಶನ ವೀಕ್ಷಿಸಲು ತಾತಾ ಹಾಗೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಶಾರೂಖ್ ಖಾನ್ ಮತ್ತು ಹೃತಿಕ್ ರೋಷನ್ ಕೂಡ ಶಾಲೆಗೆ ಆಗಮಿಸಿದ್ದು ವಿಶೇಷ.

ಕೆಂಪು ಮತ್ತು ಹಸಿರು ಮಿಶ್ರಿತ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಆರಾಧ್ಯ ಜೊತೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಸಾಥ್ ನೀಡಿದರೆ ಅಮಿತಾಭ್ ಕುಟುಬಂಬದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅತ್ತಿಗೆ ಶ್ವೇತಾ, ಐಶ್ವರ್ಯ ತಾಯಿ ಬೃಂದಾ, ರವಿನಾ ಟಂಡನ್, ಫರ್ಹಾ ಖಾನ್ ಸೇರಿದತೆ ಇತರೆ ಸೆಲೆಬ್ರಿಟಿಗಳು ಕೂಡ ಆಗಮಿಸಿದ್ದರು.

Trending

To Top