BBK8

ಸೀಕ್ರೆಟ್ ರೂಮ್ ನಲ್ಲಿದ್ದಾರೆ ರಾಜೀವ್ ಹನು ?

ಬಿಗ್ ಬಾಸ್ 8ನೇ ವಾರದ ಎಲಿಮಿನೇಷನ್ ಅಲ್ಲಿ ಕ್ರಿಕೆಟರ್ ಹಾಗೂ ನಟ ರಾಜೀವ್ ಎಲಿಮಿನೇಟ್ ಆಗಿದ್ದಾರೆ.ಇದು ಮನೆಯವರಿಗೆ ಮತ್ತು ವೀಕ್ಷಕರಿಗೆ ಶಾಕ್ ಆಗಿದೆ.ರಾಜೀವ್ ಬಳಿ ಎದ್ದ ಗೋಳ್ಡೆನ್ ಪಾಸ್ ಬಳಸದೆ ಏರುವುದು ಅತಿ ದೊಡ್ಡ ತಪ್ಪು ಎಂದು ಕೆಲವರು ಹೇಳಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ರಾಜೀವ್ ಹೊರ ಹೋದ ಬಗ್ಗೆ ಚರ್ಚೆ ಜೋರಾಗಿದೆ. ಎಲ್ಲರೂ ಕೂಡ ಈ ಬಾರಿ ರಾಜೀವ್ ವಿನ್ನರ್ ಆಗುತ್ತಾರೆ, ಅಥವಾ ಟಾಪ್ 5 ಸ್ಪರ್ದಿಗಳಲ್ಲಿ ಇರುತ್ತಾರೆ ಎಂದು ಕೊಂಡಿದ್ದರು.ಆದರೆ ಬಿಗ್ ಬಾಸ್ ಎಲ್ಲರ ನಿರೀಕ್ಷೆ ಸುಳ್ಳು ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಇಲ್ಲದೆ ಎಂಟನೇ ವಾರದ ಎಲಿಮಿನೇಷನ್ ನಡೆದು ಹೋಗಿದೆ.ಸ್ಪರ್ದಿಗಳಿಗೆ ಭಿನ್ನ ಭಿನ್ನ ಟಾಸ್ಕ್ ನೀಡುವ ಮೂಲಕ ಎಲಿಮಿನೇಷನ್ ಇಂದ ಸೇವ್ ಮಾಡಲಾಯಿತು,ಕೊನೆಗೆ ಮನೆಯಿಂದ ಹೊರಹೋಗುವವರ ವಿಟಿ ಟಿವಿಯಲ್ಲಿ ತೋರಿಸಲಾಯಿತು.ಟಿವಿಯಲ್ಲಿ ರಾಜೀವ್ ಅವರ ವಿಡಿಯೋ ಪ್ಲೇ ಆದ್ದರಿಂದ ಅವರು ಮನೆಯಿಂದ ಎಲಿಮಿನೇಟ್ ಆದರು, ಇದು ಮನೆಯ ಬೇರೆ ಎಲ್ಲಾ ಸದಸ್ಯರಿಗೂ ಹಾಗೂ ವೀಕ್ಷಕರಿಗೂ ಬಹಳ ಶಾಕಿಂಗ್ ಅನಿಸಿತು.

ಮನೆಯಲ್ಲಿ ಉಳಿದ ಸದಸ್ಯರು ಅವರ ಬಗ್ಗೆ ಏನು ಮಾತನಾಡಿಕೊಳ್ಳುತ್ತಾರೆ ಎಂದು ತಿಳಿಯಲು ರಾಜೀವ್ ಅವರನ್ನ ಸೀಕ್ರೆಟ್ ರೂಮ್ ಗೆ ಕಳುಹುಸಲಾಗಿದೆಯಂತೆ.ಒಂದು ವೇಳೆ ಎದು ನಿಜವಾದಲ್ಲಿ ಅವರು ಮುಂದಿನ ಎರಡು ವಾರಗಳ ಕಾಲ ಸೇವ್ ಆಗಿ ಮನೆಯಲ್ಲೇ ಇರುತ್ತಾರೆ.ಮತ್ತು ರಾಜೀವ್ ಅವರ ಗೋಳ್ಡೆನ್ ಪಾಸ್ ಮಡೆದಿರುವ ಶುಭಾ ಪೂಂಜಾ ಅವರು ಸಹ ಮನೆಯಲ್ಲಿ ಒಂದು ವಾರ ಸೇಫ್ ಆಗುತ್ತಾರೆ.ಇನ್ನು ಈ ವಾರದ ಎಲಿಮಿನೇಷನ್ ಬಗ್ಗೆ ಚಕ್ರವರ್ತಿ ಅವರು ಪ್ರಶಾಂತ್ ಅವರ ಬಳಿ ಮಾತನಾಡುತ್ತಾ ಈ ವಾರ ನೋಮಿನೇಷನ್ ಸೇಫ್ ಇರುತ್ತದೆ, ಅಂದರೆ ಸೀಕ್ರೆಟ್ ರೂಮ್ ಗೆ ಹೋಗಬಹುದು ಎಂದು ಕ್ಲು ಒಂದನ್ನ ನೀಡಿದ್ದರು.

Trending

To Top