ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆ 21 ದಿನಗಳ ಕಾಲ ದೇಶವನ್ನೇ ಲಾಕ್ಡೌನ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮನೆಗಳಿಂದ ಯಾರೂ ಹೊರಬರದಂತೆ ಸ್ವತಃ ತಾವೇ ಕೈ ಮುಗಿದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಜನರೆಲ್ಲಾ ಮನೆಗಳಿಂದ ಹೊರ ಬರದ ಪರಿಸ್ಥಿತಿಯಲ್ಲಿದ್ದು, ಮನೆಯಲ್ಲೇ ಕುಳಿತು ಸಮಯಕಳೆಯಲಾಗದೆ ಒದ್ದಾಡುತ್ತಿದ್ದಾರೆ. ಸದ್ಯ ಟೈಂ ಪಾಸ್ ಮಾಡಲು ಕಷ್ಟಪಡುತ್ತಿರುವ ಜನರಿಗಾಗಿ ಅದರಲ್ಲೂ ಸಿನಿಪ್ರಿಯರಿಗಾಗಿ ಸರ್ಕಾರವೇ ಒಂದೊಳ್ಳೆ ಅವಕಾಶ ನೀಡಿದೆ.
ಅದೇನಂದ್ರೆ ರಾಮಾಯಣ ಸೀರಿಯಲ್ ಅನ್ನ ರೀ ಟೆಲಿಕಾಸ್ಟ್ ಮಾಡಲು ನಿರ್ಧರಿಸಿದೆ. ಒಂದು ಕಾಲದಲ್ಲಿ ರಾಮಾಯಣ ಸೀರಿಯಲ್ ನೋಡೋಕೆ ಜನರು ಕಾದು ಕುಳಿತಿರುತ್ತಿದ್ದರು. ಯಾವ ಮನೆಯಲ್ಲಿ ಟಿವಿ ಇರ್ತಿತ್ತೋ ಅಲ್ಲಿ ಜಮಾಯಿಸುತ್ತಿದ್ರು. ಟಿವಿಗೇ ಪೂಜೆ ಮಾಡಿ ಶ್ರದ್ಧಾ ಭಕ್ತಿಯಿಂದ ರಾಮಾಯಣ ಸೀರಿಯಲ್ ನೋಡ್ತಿದ್ರು.
ಇದೀಗ ಮತ್ತೆ ಆ ಸೀರಿಯಲ್ ಅನ್ನ ರೀ ಟೆಲಿಕಾಸ್ಟ್ ಮಾಡುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಾರ್ವಜನಿಕರ ಬೇಡಿಕೆಯ ಮೇರೆಗೆ, ನಾಳೆ, ಅಂದ್ರೆ ಮಾರ್ಚ್ 28ರ ಶನಿವಾರದಿಂದ ಡಿಡಿ ನ್ಯಾಷನಲ್‌ನಲ್ಲಿ, ಬೆಳಿಗ್ಗೆ 9 ರಿಂದ-10 ರವರೆಗೆ ಒಂದು ಎಪಿಸೋಡ್ ಮತ್ತು ರಾತ್ರಿ 9 ರಿಂದ 10 ರವರೆಗೆ ಮತ್ತೊಂದು ಎಪಿಸೋಡ್ ಪ್ರಸಾರ ಮಾಡಲಾಗುತ್ತದೆ ಅಂತಾ ಮಾಹಿತಿ ನೀಡಿದ್ದಾರೆ.
