News

ಸಲಾಂ ಶರ್ಮಾ ಭಾಯ್, 22 ವರ್ಷಗಳ ಹಿಂದಿನ ವಿಶ್ವ ದಾಖಲೆ ಮುರಿದ ಹಿಟ್ ಮ್ಯಾನ್

22 ವರ್ಷಗಳ ದಾಖಲೆಯನ್ನ ಸರಿಗಟ್ಟುವ ಮೂಲಕ ಹಿಟ್ ಮ್ಯಾನ್ ರೋಹಿತ್ ಶರ್ಮಾ 2019ಕ್ಕೆ ಭರ್ಜರಿಯಾಗಿ ವಿದಾಯ ಹೇಳುತ್ತಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ರೋಹಿತ್ 9 ರನ್ಗಳಿಸುವ ಮೂಲಕ ಒಂದು ವರ್ಷದಲ್ಲಿ ಅತೀ ಹೆಚ್ಚು ಸ್ಕೋರ್ ಗಳಿಸಿ 22 ವರ್ಷಗಳ ಹಿಂದಿನ ದಾಖಲೆಯನ್ನ ಸರಿಗಟ್ಟಿದ ಖ್ಯಾತಿಗೆ ಭಾಜನರಾಗಿದ್ದಾರೆ.

ಭಾರತದ ಓಪನರ್ ಆಗಿ ಕಣಕ್ಕಿಳಿಯುವ ರೋಹಿತ್ ಶರ್ಮಾ ಪ್ರತೀ ಮ್ಯಾಚ್ನಲ್ಲಿ ಅತ್ಯದ್ಭುತ ಸ್ಕೋರ್ ಗಳಿಸುತ್ತಿದ್ದಾರೆ. ಈ ಮೂಲಕ ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕುವಲ್ಲಿ ಸಾಧ್ಯವಾಗಿದೆ. ಇದೀಗ 1977ರಲ್ಲಿ ಶ್ರೀಲಂಕಾ ಮಾಜಿ ಆಟಗಾರ ಸನತ್ ಜಯಸೂರ್ಯ ಮಾಡಿದ ದಾಖಲೆಯನ್ನ ಸರಿಗಟ್ಟಿದ್ದಾರೆ. 1997ರಲ್ಲಿ ಜಯಸೂರ್ಯ 2,387 ರನ್ ಗಳಿಸಿ ಈವರೆಗೆ ಅಗ್ರಸ್ಥನಾದಲ್ಲಿದ್ದರು.

ಈ ಮ್ಯಾಚ್ಗೂ ಮುನ್ನ ರೋಹಿತ್ ಒಟ್ಟು ಮೊತ್ತ 2,379 ಇತ್ತು, ಕೇವಲ 9 ರನ್ನ ಅವಶ್ಯಕತೆ ಇತ್ತು. ಇನ್ನು ವಿಂಡೀಸ್ ವಿರುದ್ಧದ ಎರನೇ ಮ್ಯಾಚ್ನಲ್ಲಿ ಅದ್ಭುತವಾಗಿ ಆಡಿದ್ರಿಂದ ತನ್ನ ಸ್ಕೋರ್ ಜಾಸ್ತಿ ಮಾಡಿಕೊಳ್ಳಲು ಸಹಾಯವಾಗಿತ್ತು. ಇನ್ನು ದಾಖಲೆ ಮೇಲೆ ದಾಖಲೆ ಮಾಡುತ್ತಿರುವ ಹಿಟ್ಮ್ಯಾನ್ಗೆ ದಾಖಲೆಯ ಸರದಾರ ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ. ಇಂದು ಕಟಕ್ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕೊನೆಯ ಏಕದಿನ ಪಂದ್ಯ ನಡೆಯುತ್ತಿದೆ.

Trending

To Top