Film News

ಸರ್ಕಾರು ವಾರಿ ಪಾಠ ಚಿತ್ರದಲ್ಲಿ ನಟಿಸಲಿದ್ದಾರಾ ರಿಯಲ್ ಸ್ಟಾರ್ ಉಪೇಂದ್ರ ?

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಮುಂದಿನ ಚಿತ್ರ ಯಾವುದು ಎಂದು ಈಗಾಗಲೇ ನಮಗೆಲ್ಲಾ ತಿಳಿದಿದೆ. ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಹುಟ್ಟುಹಬ್ಬದಂದು ತಮ್ಮ ಮುಂದಿನ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಅನ್ನು ಮಹೇಶ್ ಬಾಬು ಬಿಡುಗಡೆ ಮಾಡಿದ್ದರು.

‘ಸರ್ಕಾರು ವಾರಿ ಪಾಠ’ ಚಿತ್ರದ ವಿಲನ್ ಪಾತ್ರದಲ್ಲಿ ಕಿಚ್ಚ ಸುದೀಪ್ ನಟಿಸಲಿದ್ದಾರೆ ಎಂಬ ಮಾತುಗಳು ಕೆಲದಿನಗಳ ಹಿಂದೆ ಕೇಳಿಬಂದಿತ್ತು. ಸುದೀಪ್ ಈಗಾಗಲೇ ಹಲವಾರು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಸುದೀಪ್ ನಟಿಸಿದ ಕೊನೆಯ ತೆಲುಗು ಚಿತ್ರ ಸೈರಾ ನರಸಿಂಹ ರೆಡ್ಡಿ. ಸುದೀಪ್ ಅವರ ಅಭಿನಯದಿಂದ ಇಂಪ್ರೆಸ್ ಆಗಿರುವ ಸರ್ಕಾರು ವಾರಿ ಪಾಠ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಸುದೀಪ್ ಅವರೇ ತಮ್ಮ ಚಿತ್ರದ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂದು ಬಯಸಿದ್ದಾರೆ, ಹಾಗಾಗಿ ಸುದೀಪ್ ಅವರನ್ನು ಸಂಪರ್ಕ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೆಲದಿನಗಳ ಹಿಂದೆ ಸುದ್ದಿಗಳು ಬಂದಿದ್ದವು.. ಆದರೀಗ , ಸುದೀಪ್ ಅವರ ಬದಲಾಗಿ ಆ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ..

ರಿಯಲ್ ಸ್ಟಾರ್ ಉಪೇಂದ್ರ ಅವರೂ ಸಹ ಹಲವಾರು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರ ಅವರು ನಟಿಸಿದ ಹಿಂದಿನ ತೆಲುಗು ಚಿತ್ರ ಸನ್ ಆಫ್ ಸತ್ಯಮೂರ್ತಿ, ಇದೀಗ ಸರ್ಕಾರು ವಾರಿ ಪಾಠ ಸಿನಿಮಾದಲ್ಲಿ ಉಪೇಂದ್ರ ನಟಿಸಲಿದ್ದಾರೆ ಎಂಬ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಈ ಚಿತ್ರಕ್ಕೆ ಟೈಟಲ್ ಇಡುವ ಮೊದಲೇ ಚಿತ್ರತಂಡ ಉಪೇಂದ್ರ ಅವರನ್ನು ಸಂಪರ್ಕ ಮಾಡಿದೆ, ರಿಯಲ್ ಸ್ಟಾರ್ ಸಹ ಕಥೆ ಕೇಳಿ ಇಂಪ್ರೆಸ್ ಆಗಿದ್ದಾರೆ, ಹಾಗಾಗಿ ಸರ್ಕಾರು ವಾರಿ ಪಾಠ ಸಿನಿಮಾ ಮೂಲಕ ರಿಯಲ್ ಸ್ಟಾರ್ ಮತ್ತೊಮ್ಮೆ ಟಾಲಿವುಡ್ ಅಂಗಳ ಪ್ರವೇಶಿಸುವುದು ಖಚಿತ ಎಂದು ತೆಲುಗು ಸಿನಿಮಾದ ಮೂಲಗಳು ಹೇಳುತ್ತಿವೆ.

ಆದರೆ ಉಪೇಂದ್ರ ಅವರಿಂದ ಆಗಲಿ ಅಥವಾ ಸರ್ಕಾರು ವಾರಿ ಪಾಠ ಚಿತ್ರತಂಡದಿಂದ ಆಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ, ಈ ಇಬ್ಬರು ಕನ್ನಡ ನಟರಲ್ಲಿ ಒಬ್ಬರು ಈ ಚಿತ್ರದಲ್ಲಿ ನಟಿಸುವುದಂತೂ ಕನ್ಫರ್ಮ್ ಆಗಿದೆ. ಮುಂದಿನ ಅಪ್ಡೇಟ್ ಗಳಿಗಾಗಿ ಸಿನಿಪ್ರಿಯರು ಇನ್ನು ಸ್ವಲ್ಪ ದಿನ ಕಾಯಬೇಕಿದೆ.

Trending

To Top