BBK8

ಸರ್ಕಾರದ ಹೊಸ ರೂಲ್ಸ್ ಇಂದಾಗಿ ಅರ್ಧಕ್ಕೆ ನಿಲ್ಲಲಿದೆಯೇ ಬಿಗ್ ಬಾಸ್ ?

ರಾಜ್ಯದಲ್ಲಿ ಕೊರೋನ ಮಹಾಮಾರಿ ಅಟ್ಟಹಾಸ ಮಿತಿಮೀರುತ್ತಿದೆ.ದಿನ ದಿನಕ್ಕೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಇದರ ನಡುವೆ ಸಾವುಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬರುತ್ತಿದೆ. ಆ ಕಾರಣದಿಂದ ಸರ್ಕಾರ ಅರ್ಧ ಲಾಕ್ ಡೌನ್ ಘೋಷಣೆ ಮಾಡಿದೆ. ವಾರದಲ್ಲಿ ಎರಡು ದಿನ ಶನಿವಾರ ಮತ್ತು ಬಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತದೆ.ಇನ್ನುಳಿದಂತೆ ಎಲ್ಲಾ ಗಳನ್ನು ಮುಚ್ಚಲಾಗಿದೆ.ಪಬ್, ಹೋಟೆಲ್, ದೇವಸ್ಥಾನ, ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.ಇನ್ನು ಹೋಟೆಲ್ ಗಳಿಗೆ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ.

ಇದರ ನಡುವೆ ಕಿರುತೆರೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ತಿಳಿದುಬಂದಿದ್ದು.ಈಗಾಗಲೇ ಎಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿವೆಯೋ ಮತ್ತು ಎಷ್ಟು ಎಪಿಸೋಡ್ ಗಳು ಚಿತ್ರೀಕರಿಸಲಾಗಿದೆ ಅಷ್ಟು ಮಾತ್ರ ಪ್ರಸಾರ ಮಾಡಲು ಅವಕಾಶ ಇದ್ದು, ಮುಂದಿನ ಹಂತದ ಚಿತ್ರೀಕರಣ ನಡೆಸಲು ಸರ್ಕಾರ ಯಾವುದೇ ಕ್ರಮ ಜಾರಿಗೆ ತಂದಿಲ್ಲ.

ಇನ್ನುಳಿದ ಹಾಗೆ ರಿಯಾಲಿಟಿ ಶೋಗಳ ವಿಷಯಕ್ಕೆ ಬರುವುದಾದರೆ ಬಿಗ್ ಬಾಸ್ ಅನ್ನು ಅರ್ಧಕ್ಕೆ ನಿಲ್ಲಿಸಲು ಸರ್ಕಾರ ಚಿಂತನೆ ನಡೆಸುತ್ತಿದ್ದು.ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಸೇಫ್ ಆಗಿದ್ದಾರೆ, ಆದರೆ ಇದನ್ನು ಸೆರೆ ಹಿಡಿಯುವ ತಂತ್ರಜ್ಞರು, ಛಾಯಾಗರಾಕರ ಬಗ್ಗೆ ಚಿಂತೆಯಾಗಿದೆ.ದಿನಾಲು ತಿರಗಾಡುವ, ಕ್ಯಾಮೆರಾಮ್ಯಾನ್ ಗಳಿಗಾಗಿ ಈಗಾಗಲೇ ಅರ್ಧ ಮುಗಿದಿರುವ ಬಿಗ್ ಬಾಸ್ ಕಾರ್ಯಕ್ರಮವನ್ನ ನಿಲ್ಲಿಸುತ್ತಾರ ಅಥವಾ ಸರ್ಕಾರದ ಅನುಮತಿ ಪಡೆದು ಮುಂದುವರೆಸುತ್ತಾರ ಕಾಡುನೋಡಬೇಕಾಗಿದೆ.

Trending

To Top