Tv Shows

‘ಸರಿಗಮಪ’ ಗೆ ವಾಪಸ್ ಆದ ಅರ್ಜುನ್ ಜನ್ಯ ಹೇಳಿದ್ದೇನು?

ಹೃದಯಾಘಾತಕ್ಕೊಳಗಾಗಿದ್ದ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಈಗ ಗುಣಮುಖರಾಗಿದ್ದು, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗೆ ಮತ್ತೆ ವಾಪಸ್ ಆಗಿದ್ದಾರೆ. ಈ ವೇಳೆ ತಮ್ಮ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ತಮಗಾಗಿ ಪ್ರಾರ್ಥಿಸಿದವರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಕಡಿಮೆ. ನಾಡಿನ ಪ್ರತಿಯೊಬ್ಬರ ಆಶೀರ್ವಾದ, ಪ್ರಾರ್ಥನೆಯಿಂದ ಗುಣಮುಖವಾಗಿದ್ದೇನೆ. ಈ ವೇದಿಕೆಯನ್ನು ಸಹ ಮಿಸ್ ಮಾಡಿಕೊಂಡಿದ್ದೇನೆ. ಆರೋಗ್ಯದಲ್ಲಿ ಏರುಪೇರು ಕಂಡ ತಕ್ಷಣ ಎಲ್ಲರೂ ನನ್ನ ಬಳಿ ಬಂದರು. ನಾನು ಒಪ್ಪಿಕೊಂಡಿದ್ದ ಕಾರ್ಯಕ್ರಮವನ್ನ ರಾಜೇಶ್ ಕೃಷ್ಣನ್ ನಡೆಸಿಕೊಟ್ಟರು. ಇನ್ನು ವಿಜಯ್ ಪ್ರಕಾಶ್ ಮನೆಗೆ ಬಂದು ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಾಯತ ಕಟ್ಟಿಸಿದರು ಎಂದು ಹೇಳಿದರು.

ನಮ್ಮ ತಂದೆ ಅಗಲಿ 25 ರಿಂದ 26 ವರ್ಷ ಆಯ್ತು. ಕೆಲವು ದಿನಗಳಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ನನಗಾಗಿ ಹಾರೈಸಿದವರಲ್ಲಿ ನಮ್ಮ ತಂದೆಯನ್ನು ನೋಡಿದೆ ಎಂದು ಭಾವುಕರಾದರು.

Trending

To Top