Kannada Updates
Film News

ಸದ್ದಿಲದೆ ಫೈಟ್ ಶೂಟಿಂಗ್ ಮುಗಿಸುತ್ತಿದ್ದಾನೆ ಜೇಮ್ಸ್!

 ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಜೇಮ್ಸ್​ ಅವತಾರದಲ್ಲಿ ಅಖಾಡಕ್ಕೆ ಇಳಿದೇಬಿಟ್ಟಿದ್ದಾರೆ. ಸೈಲೆಂಟಾಗಿ ಕಿಡಿಗೇಡಿಗಳ ಮೂಳೆ ಮುರಿಯುವ ಕಾಯಕ ಶುರುವಚ್ಚಿಕೊಂಡಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮತ್ತು ಬಹದ್ದೂರ್​ ಚೇತನ್​​ ಕ್ರೇಜಿ ಕಾಂಬಿನೇಷನ್​ ಸಿನಿಮಾ ಜೇಮ್ಸ್. ಇತ್ತೀಚೆಗಷ್ಟೆ ಬಾಲಾಂಜನೇಯ ಸ್ವಾಮಿಗೆ ಕೈಮುಗಿದು ಚಿತ್ರಕ್ಕೆ ಚಾಲನೆ ಕೊಟ್ಟಿದ್ದ ಚಿತ್ರತಂಡ, ಸದ್ಯ ಸೈಲೆಂಟಾಗಿ ಶೂಟಿಂಗ್​ ಸ್ಟಾರ್ಟ್​​​ ಮಾಡಿದೆ. ಅದು ಕೂಡ ಆಯಕ್ಷನ್​​ ಎಪಿಸೋಡ್​ ಶೂಟಿಂಗ್​ ಎನ್ನೋದು ವಿಶೇಷ.

ಈ ಚಿತ್ರದಲ್ಲಿ ಮಾಸ್​​ ಲೋಕಲ್​ ಹುಡುಗನಾಗಿ ಪುನೀತ್​ ರಾಜ್​ಕುಮಾರ್​ ಬಣ್ಣ ಹಚ್ಚಿದ್ದಾರೆ. ಬಹದ್ಧೂರ್​ ಚೇತನ್​ ಪವರ್​ ಸ್ಟಾರ್​ ಅಭಿಮಾನಿಗಳನ್ನ ಮನಸ್ಸಿನಲ್ಲಿಟ್ಟುಕೊಂಡು ಜೇಮ್ಸ್​ ಕತೆ ಹೆಣೆದಿದ್ದಾರೆ.

ಅಪ್ಪುನ ಬಹಳ ವಿಭಿನ್ನ ಅವತಾರದಲ್ಲಿ ತೋರಿಸೋ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗ್ತಿದೆ. ಪಕ್ಕಾ ಮಾಸ್​ ಮಾಸಾಲಾ ಆಯಕ್ಷನ್​ ಎಂಟ್ರಟ್ರೈನರ್​ ಸಿನಿಮಾ ಇದು. ಅಪ್ಪು ಆಯಕ್ಷನ್​. ಆಯಕ್ಷನ್​​ ಅಂದ್ರೆ ಅಪ್ಪು. ಹಾಗಾಗಿ ಬಹಳ ವಿಭಿನ್ನವಾಗಿ ಆಯಕ್ಷನ್​ ಸೀಕ್ವೆನ್ಸ್​ ಕಂಪೋಸ್ ಮಾಡಲಾಗ್ತಿದೆ.

ಸದ್ಯ ಪುನೀತ್​ ರಾಜ್​ಕುಮಾರ್​​ ಯುವರತ್ನ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ​ಮೊನ್ನೆಯಷ್ಟೆ ಜಾನಿ ಮಾಸ್ಟರ್​​ ನೃತ್ಯ ಸಂಯೋಜನೆಯಲ್ಲಿ ‘ಊರಿಗೊಬ್ಬ ರಾಜ’ ಎನ್ನೋ ಸಾಂಗ್​ ಶೂಟ್​ ಮಾಡಿ ಮುಗಿಸಿದ್ದಾರೆ. ಫೆ.24ಕ್ಕೆ ಡ್ಯುಯೆಟ್​ ಸಾಂಗ್​ ಶೂಟಿಂಗ್​ಗಾಗಿ ಯೂರೋಪ್​ ಫ್ಲೈಟ್​ ಹತ್ತಲಿದ್ದಾರೆ. ಈ ಗ್ಯಾಪ್​ನಲ್ಲೇ ಜೇಮ್ಸ್​ ಸಿನಿಮಾದ ಸಣ್ಣ ಆಯಕ್ಷನ್​ ಸೀಕ್ವೆನ್ಸ್​ ಶೂಟಿಂಗ್​ ಮಾಡಲಾಗುತ್ತಿದೆ.

ನಾಲ್ಕರಿಂದ ಐದು ದಿನಗಳ ಸಣ್ಣ ಶೆಡ್ಯೂಲ್​ನಲ್ಲಿ ರವಿವರ್ಮ ಸಾಹಸ ಸಂಯೋಜನೆಯಲ್ಲಿ ಜೇಮ್ಸ್​ ಅಬ್ಬರಿಸ್ತಿದ್ದಾನೆ. ವೈಟ್​ಫೀಲ್ಡ್​ ಹೂಡಿ ಬಳಿ ಸೆಟ್​ ಆಗಿ ಈ ಆಯಕ್ಷನ್​ ಎಪಿಸೋಡ್​ ಚಿತ್ರೀಕರಣ ಮಾಡಲಾಗ್ತಿದೆ. ಕಥೆಗೆ ತಕ್ಕಂತೆ ನೈಟ್​​ ಮೂಡ್​ನಲ್ಲಿ ಶೂಟಿಂಗ್​ ಮಾಡಲಾಗ್ತಿದೆ. ಪವರ್​ ಸ್ಟಾರ್​ ನೆವರ್​ ಬಿಫೋರ್​ ಅನ್ನುವಂತೆ ಸ್ಟಂಟ್ಸ್​​ನ ಟ್ರೈ ಮಾಡ್ತಿದ್ದಾರೆ. ಐದು ದಿನಗಳ ಕಾಲ ರಾತ್ರಿ ಹೊತ್ತು ಸೆಟ್​ನಲ್ಲಿ ಫಸ್ಟ್​ ಶೆಡ್ಯೂಲ್​ ಕಂಪ್ಲೀಟ್​ ಮಾಡುವ ಲೆಕ್ಕಾಚಾರ ನಡೀತಿದೆ. ಛಾಯಾಗ್ರಾಹಕ ಶ್ರೀಶ ಕುದುವಳ್ಳಿ ಜೇಮ್ಸ್​ ಆಯಕ್ಷನ್​ ಧಮಾಕ ಸೆರೆ ಹಿಡಿಯುತ್ತಿದ್ದಾರೆ.

Related posts

ಶ್ರೀ ಮುರಳಿ ಮತ್ತು ಆಶಿಕಾ ರಂಗನಾಥ್ ನಟಿಸಲಿರುವ ‘ಮದಗಜ’ ಚಿತ್ರದ ಮುಹೂರ್ತ ಇಂದು ನೆರವೇರಿತು! ಮುಹೂರ್ತ ಕಾರ್ಯಕ್ರಮದ ಫೋಟೋ ಗ್ಯಾಲರಿ ಇಲ್ಲಿದೆ

Pooja Siddaraj

ತಂದೆ-ಮಗಳ ಬಾಂಧವ್ಯದ ಬಗ್ಗೆ ರಶ್ಮಿಕಾ ಮಾತುಗಳು

Pooja Siddaraj

ಸಹೋದರನ ಮದುವೆಯಲ್ಲಿ ಮಿಂಚುತ್ತಿರುವ ರಾಗಿಣಿ

Pooja Siddaraj

34 ವರ್ಷಗಳ ಹಿಂದಿನ ನೆನಪನ್ನು ತೆರೆದಿಟ್ಟ ನವರಸ ನಾಯಕ ಜಗ್ಗೇಶ್:, 34 ವರ್ಷಗಳ ಅವರ ಪತ್ನಿ ಪರಿಮಳಾ ಅವರು ಕೊಟ್ಟ ಗಿಫ್ಟ್ ಏನು ಗೊತ್ತಾ?

Pooja Siddaraj

ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್!

Pooja Siddaraj

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುಗಾದಿ ಹಬ್ಬಕ್ಕೆ ಶುಭ ಕೋರಿದ ಪರಿ ನೋಡಿ

Pooja Siddaraj

ಆಕ್ಸಿಡೆಂಟ್ ನಂತರ ಸ್ಪಷ್ಟನೆ ನೀಡಿದ ಶರ್ಮಿಳಾ ಮಾಂಡ್ರೆ

Pooja Siddaraj

ಶೀಘ್ರದಲ್ಲಿ ಕನ್ನಡಕ್ಕೆ ಬರಲಿದೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ರೋಬೋಟ್’

Pooja Siddaraj

ಕಾರ್ಮಿಕರ ದಿನಾಚರಣೆಯಂದು ರಾಬರ್ಟ್ ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

Pooja Siddaraj

ಇಂದು 3 ಕನ್ನಡ ಚಿತ್ರಗಳು ತೆರೆಗೆ ..

Pooja Siddaraj

‘ಬಾಹುಬಲಿ2’ ಚಿತ್ರವನ್ನು ಹಿಂದಿಕ್ಕಿದ ‘ಆರ್ ಆರ್ ಆರ್’

Pooja Siddaraj

ಹೊಸ ಲುಕ್ ನಲ್ಲಿ ಶಿವಣ್ಣ

Pooja Siddaraj