ಸಖತ್ ವೈರಲ್ ಆಗ್ತಿದೆ ಪ್ರಜ್ವಲ್ ಮತ್ತು ರಾಗಿಣಿ ಡ್ಯಾನ್ಸ್ ವೀಡಿಯೊ…

ಲಾಕ್ಡೌನ್ ಹಿನ್ನೆಲೆಯಲ್ಲಿ ನಟ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ಚಂದ್ರನ್ ಏಕತಾನತೆ ಮರೆಯಲು ಹಾಡು ಹಾಗೂ ನೃತ್ಯದ ಮೊರೆ ಹೋಗಿದ್ದಾರೆ.

ಅಬುಸಾದಮೆಂಟ್ ಎನ್ನುವ ಬ್ರೆಜಿಲಿಯನ್ ಹಾಡಿಗೆ ಇಬ್ಬರು ಹೆಜ್ಜೆ ಹಾಕಿದ್ದಾರೆ. 1.5 ನಿಮಿಷದ ನರ್ತಿಸುವ ವಿಡಿಯೋ ಅನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನೃತ್ಯದ ವಿಡಿಯೋ ಅಪ್ಲೋಡ್ ಆಗುತ್ತಲೇ 11, 174 ಮಂದಿ ವೀಕ್ಷಣೆ ಮಾಡಿದ್ದಾರೆ. ಹಲವು ಮಂದಿ ಪ್ರತಿಕ್ರಿಯೆ ಕೂಡ ವ್ಯಕ್ತಪಡಿಸಿದ್ದಾರೆ. ಇದೀಗ ಆ ವೀಡಿಯೊ ಬರೋಬ್ಬರಿ 3ಲಕ್ಷ ವೀಕ್ಷಣೆಗಳನ್ನು ಪಡೆದಿದೆ..

ಲಾಕ್ಡೌನ್ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ನಟರು ಮನೆಯಲ್ಲೇ ಕಾಲ ಕಳೆಯಲು ಹಲವು ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದಾರೆ.

ಲಾಕ್ಡೌನ್ ಕಾಲ ಕಳೆಯಲು ಪತ್ನಿ ಜತೆ ಈ ನೃತ್ಯ ಎಂದು ಅವರು ಶೀರ್ಷಿಕೆ ಬರೆದು ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

Previous articleತರಕಾರಿ ತರುವ ಮುನ್ನ ಈ ವಿಷಯಗಳನ್ನು ನೆನಪಿಡಿ
Next articleಇಂದು ಒಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಮೆಗಾಸ್ಟಾರ್ ಚಿರಂಜೀವ ಅವರ ಮೊದಲ ಸಂಭಾವನೆ ಎಷ್ಟು ಗೊತ್ತಾ?