Cinema

ಸಖತ್ ವೈರಲ್ ಆಗ್ತಿದೆ ಡಾ.ರಾಜ್ ಮುಖವಿರುವ ಬೆಂಕಿ ಪೊಟ್ಟಣದ ಫೋಟೋ !

ವರನಟ ಡಾ.ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜ್ ನಟಿಸಿದ ಸಾಕಷ್ಟು ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗಿವೆ. ಇವರ ಪ್ರಮುಖ 31 ಚಿತ್ರಗಳು ಏಳು ಭಾಷೆಗಳಲ್ಲಿ 53 ಬಾರಿ ರೀಮೇಕ್ ಮಾಡಿರುವುದು ವಿಶೇಷ.

ರಾಜ್ ಕುಮಾರ್ ಅವರಿಗೆ ಇಡೀ ಪ್ರಪಂಚದ ತುಂಬಾ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಡಾ.ರಾಜ್ ಕುಮಾರ್ ಅವರು ನಿಧಾನರಾಗಿ 14 ವರ್ಷ ಕಳೆದರೂ ಅಭಿಮಾನಿ ಬಳಗ ಸ್ವಲ್ಪವೂ ಕಡಿಮೆಯಾಗಿಲ್ಲ. ಇದು ಅವರ ಸಾಧನೆಗೆ ಹಿಡಿದ ಕೈಗನ್ನಡಿ.

ಡಾ.ರಾಜ್ ಕುಮಾರ್ ಅವರ ಮುಖವನ್ನು ಪೆನ್ಸಿಲ್ ನಲ್ಲಿ ಕೆತ್ತಿದ್ದು, ಮರಳಿನಲ್ಲಿ ಡಾ.ರಾಜ್ ಶಿಲ್ಪ ಮಾಡಿರುವ ಬಗ್ಗೆ ನೀವು ಕೇಳಿರುತ್ತೀರಿ. ಆದರೆ, ಈಗ ಅವರ ಹೆಸರಲ್ಲಿ ಬಂದ ಬೆಂಕಿ ಪೊಟ್ಟಣದ ಫೋಟೋ ಒಂದು ಸಾಕಷ್ಟು ವೈರಲ್ ಆಗಿದೆ.

ಗ್ರೇಸ್ ಮ್ಯಾಚಸ್ ಹೆಸರಿನ ಸಂಸ್ಥೆ ಬೆಂಕಿ ಪೊಟ್ಟಣ ಸಿದ್ಧ ಪಡಿಸಿತ್ತು. ಈ ಪೊಟ್ಟಣದ ಮೇಲ್ಭಾಗದಲ್ಲಿ ರಾಜ್ ಕುಮಾರ್ ಚಿತ್ರವನ್ನು ಮುದ್ರಿಸಲಾಗಿದೆ. ಈ ಪೊಟ್ಟಣಕ್ಕೆ ಕೇವಲ 50 ಪೈಸೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Trending

To Top