Film News

ಸಖತ್ ಆಗಿದೆ ಅಪ್ಪು ಹಾಡಿದ ‘ಕಾಣದಂತೆ ಮಾಯವಾದ ಕಾಳಿದಾಸ’ನ ಪ್ರೇಮಗೀತೆ…

 ಈ ಬಾರಿಯ 2020 ಜನವರಿಯನ್ನ ಇನ್ನಷ್ಟು ಸೆಲೆಬ್ರೇಟ್ ಮಾಡೋಕೆ ಸಿನಿಪ್ರಿಯರಿಗಾಗಿ ಒಂದಿಷ್ಟು ಸಿನ್ಮಾಗಳು ಕಾದು ಕುಂತಿವೆ.ಅದ್ರಲ್ಲೂ ಈ ತಿಂಗಳ ಕೊನೆಯ ವಾರ ಅಂದ್ರೆ ಸಿನಿಶುಕ್ರವಾರ ತೆರೆಮೇಲೆ ರಾರಾಜಿಸೋಕೆ ರೆಡಿಯಾದ ಕಾಣದಂತೆ ಮಾಯವಾದನು ಚಿತ್ರ ರಿಲೀಸ್ ಗೆ ಹತ್ತಿರವಾಗ್ತಿದ್ದಂತೆ ಒಂದೊಂದೇ ಜಲಕ್ ರಿವೀಲ್ ಮಾಡ್ತಾ ಚಿತ್ರದ ಕ್ಯೂರಿಯಾಸಿಟಿನ ಜಾಸ್ತಿಮಾಡ್ತಿದೆ.

‘ಕಾಣದಂತೆ ಮಾಯವಾದನು’ ಟ್ರೈಲರ್ ನಲ್ಲೇ ಈ ಚಿತ್ರದಲ್ಲೇನೋ ಇದೆ ಅನ್ನೊ ಕುತೂಹಲ ಕೊಟ್ಟ ಚಿತ್ರ.ನಂತರ ಟೀಸರ್,ಟ್ರೈಲರ್ ಹಾಗೂ ಮೂರು ಹಾಡುಗಳ ಮೂಲಕ ಭರವಸೆ ಹುಟ್ಟಿಸಿದ ಈ ಹಾರಾರ್ ಥ್ರಿಲ್ಲರ್ ಚಿತ್ರದ ವೀಡಿಯೋ ಸಾಂಗ್ ರಿಲೀಸ್ ಆಗಿದೆ.ಅಪ್ಪು ಹಾಡಿರೋ ‘ಕಾಣದಂತೆ ಮಾಯವಾದನು ಕಾಳಿದಾಸ’ ಹಾಡು ಬ್ಯೂಟಿಫುಲ್ ಲೋಕೇಷನಲ್ಲಿ ಚಿತ್ರಿಸಲಾಗಿದ್ದು,ವಿಕಾಸ್ ಹಾಗೂ ಸಿಂಧೂ ಪ್ರೇಮಗೀತೆ ಎಂಥವರನ್ನೂ ಕಾಣೆಯಾಗುವಂತೆ ಮಾಡತ್ತೆ.

ಇದೇ ತಿಂಗಳ 31 ಕ್ಕೆ ತೆರೆಗೆ ಬರಲು ಅಣಿಯಾಗಿರೋ ಈ ಚಿತ್ರಕ್ಕೆ ಈ ಹಿಂದೆ ದುನಿಯಾ ವಿಜಯ್ ಅಭಿನಯದ ‘ಜಯಮ್ಮನ ಮಗ ‘ ಚಿತ್ರ ನಿರ್ದೇಶಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ನಾಯಕನಟನಾಗಿ ಅದೃಷ್ಟಪರೀಕ್ಷೆ ಇಳಿತಿದ್ರೆ,ಇವರಿಗೆ ಸಿಂಧೂ ಲೋಕನಾಥ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇವರಿಬ್ಬರ ಕಾಂಬೋ ಗೆ ರಾಜ್‌ ಪತ್ತಿಪಾಟಿ ಆಯಕ್ಷನ್ ಕಟ್ ಹೇಳಿದ್ದಾರೆ. ಇನ್ನುಳಿದಂತೆ ಚಂದ್ರಶೇಖರ್ ನಾಯ್ಕ್, ಸೋಮ್ ಸಿಂಗ್, ಪುಷ್ಮಾ ಸೋಮ್ ಸಿಂಗ್ ಈ ಚಿತ್ರದ ನಿರ್ಮಾಪಣೆಯ ಜವಾಬ್ದಾರಿ ಹೊತ್ತಿದ್ದಾರೆ.

‘ವಿನಯಪ್ರಸಾದ್, ಸುಚೇಂದ್ರ ಪ್ರಸಾದ್, ಧರ್ಮಣ್ಣ, ಸೀತಾ ಕೋಟೆ. ಸನ್ನಿ ಮಹಿಪಾಲ್, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ,ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವಿದ್ದು ಇದೇ 31 ಕ್ಕೆ ತೆರೆಗೆ ಬರೋ ಕಾಣದಂತೆ ಮಾಯವಾದನು ಚಿತ್ರ ಥಿಯೇಟರ್ ನಲ್ಲಿ ಸಿನೆಮಾ ನೋಡಿದ ಪ್ರೇಕ್ಷಕರನ್ನ ಕಾಣದ ಖುಷಿಯಲಿ ತೇಲಾಡಿಸುತ್ತಾನ ಅನ್ನೋದನ್ನ ಕಾದು ನೋಡ್ಬೇಕಿದೆ.

https://youtu.be/OSEDH3UjAUQ

Trending

To Top