Kannada Updates
Film News

ಸಂಭಾವನೆ ವಿಚಾರಕ್ಕಾಗಿ ಕೆಜಿಎಫ್2 ಚಿತ್ರದ ಪ್ರಮುಖ ಪಾತ್ರ ತಿರಸ್ಕರಿಸಿದ ಬಹುಭಾಷಾ ನಟಿ ಯಾರು ಗೊತ್ತಾ? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್!

‘ಕೆಜಿಎಫ್’ ಸಿನಿಮಾಗಿಂತ ದೊಡ್ಡ ಮಟ್ಟದಲ್ಲಿ ‘ಕೆಜಿಎಫ್ 2’ ಸಿನಿಮಾ ಇರಲಿದೆ ಎನ್ನುವುದನ್ನು ನಟ ಯಶ್ ಈ ಹಿಂದೆಯೇ ಹೇಳಿದ್ದರು. ಹೀಗಾಗಿ ಸಿನಿಮಾದ ಕಲಾವಿದರ ವಿಚಾರದಲ್ಲಿ ಚಿತ್ರತಂಡ ದೊಡ್ಡ ಮಟ್ಟದ ಪ್ಲಾನ್ ಮಾಡಿತ್ತು. ಅದೇ ರೀತಿ ಉತ್ತರ ಹಾಗೂ ದಕ್ಷಿಣ ಭಾರತದ ಕೆಲವು ಜನಪ್ರಿಯ ಕಲಾವಿದರನ್ನು ಸಂಪರ್ಕ ಮಾಡಿತ್ತು.

ಸಿನಿಮಾದ ಒಂದು ಪ್ರಮುಖ ಪಾತ್ರಕ್ಕಾಗಿ ಚಿತ್ರತಂಡ ಮೊದಲು ಒಬ್ಬ ನಟಿಗೆ ಆಫರ್ ನೀಡಿತ್ತು.

ಆದರೆ, ಸಂಭಾವನೆಯ ವಿಚಾರಕ್ಕೆ ಆ ನಟಿ ಸಿನಿಮಾವನ್ನು ಕೈ ಬಿಟ್ಟರು.ಬಾಹುಬಲಿ ಶಿವಗಾಮಿ
ಸಂಭಾವನೆ ವಿಷಯಕ್ಕೆ ‘ಕೆಜಿಎಫ್ 2’ ರಮ್ಯಾ ಕೃಷ್ಣ

‘ಬಾಹುಬಲಿ’ ಸಿನಿಮಾದ ಶಿವಗಾಮಿ ರಮ್ಯಾ ಕೃಷ್ಣ ‘ಕೆಜಿಎಫ್ 2’ನಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ, ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಅದರ ಕಾರಣ ಇದೀಗ ಬಹಿರಂಗವಾಗಿದೆ. ಸಂಭಾವನೆ ವಿಚಾರದಲ್ಲಿ ರಮ್ಯಾ ಕೃಷ್ಣ ಸಿನಿಮಾವನ್ನು ತಿರಸ್ಕರಿಸಿದ್ದರಂತೆ.

ರಮ್ಯಾ ಕೃಷ್ಣ ‘ಕೆಜಿಎಫ್ 2’ ಸಿನಿಮಾಗೆ ಇಷ್ಟೇ ಸಂಭಾವನೆ ಕೇಳಿದ್ದರು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೆ, ‘ಬಾಹುಬಲಿ’ ನಂತರ ರಮ್ಯಾ ಕೃಷ್ಣ ಸಂಭಾವನೆ ಹೆಚ್ಚಾಗಿದೆ. ‘ಬಾಹುಬಲಿ’ ಸಿನಿಮಾಗೆ ರಮ್ಯಾ ಕೃಷ್ಣ 2.5 ಕೋಟಿ ರೂಪಾಯಿ ಪಡೆದಿದ್ದು, ಅದಕ್ಕೂ ಹೆಚ್ಚಿನ ಹಣವನ್ನು ಬೇಡಿಕೆ ಇಟ್ಟಿರಬಹುದು.

ತಾವು ಕೇಳಿದ ಸಂಭಾವನೆ ಸಿಗಲಿಲ್ಲ ಎಂಬ ಕಾರಣಕ್ಕೆ ರಮ್ಯಾ ಕೃಷ್ಣ ಸಿನಿಮಾ ಬಿಟ್ಟರು. ಆ ನಂತರ ಆ ಪಾತ್ರಕ್ಕೆ ಬಾಲಿವುಡ್ ನಟಿ ರವಿನಾ ಟಂಡನ್ ರನ್ನು ಚಿತ್ರತಂಡ ಸಂಪರ್ಕ ಮಾಡಿತು. ಮೊದಲು ರವಿನಾ ಟಂಡನ್ ಗೊಂದಲದಲ್ಲಿ ಇದ್ದರೂ ನಂತರ, ಓಕೆ ಹೇಳಿದರು. ಚಿತ್ರದ ಪ್ರಧಾನಿ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ರವಿನಾ ಟಂಡನ್ ಕಾಣಿಸಿಕೊಳ್ಳುತ್ತಿದ್ದಾರೆ.

Related posts

ಕೊರೊನಾ ರಜೆಯನ್ನು ಕ್ರಿಯೇಟಿವ್ ಆಗಿ ಕಳೆಯುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್!

Pooja Siddaraj

ಮದಗಜ ಚಿತ್ರದ ನಾಯಕಿ ಆಶಿಕಾ ರಂಗನಾಥ್

Pooja Siddaraj

ಓಟಿಟಿ ನಲ್ಲಿ ಬಿಡುಗಡೆಯಾಗಲಿದೆಯಾ ರಣವೀರ್ ದೀಪಿಕಾ ಅಭಿನಯದ ’83’?

Pooja Siddaraj

ಮಹಿಳಾ ದಿನಾಚರಣೆಯಂದು ತಮ್ಮ ಮಗುವಿನ ಮುದ್ದಾದ ಫೋಟೋ ಹಂಚಿಕೊಂಡ ನಟಿ ಸ್ನೇಹ!

Pooja Siddaraj

ಅನುಷ್ಕಾ ಶೆಟ್ಟಿ ಸಿನಿರಂಗ ಪ್ರವೇಶಿಸಿ ಇಂದಿಗೆ 15 ವರ್ಷ!

Pooja Siddaraj

ಶಿವಣ್ಣನ ಮೊದಲ ಸಿನಿಮಾ ‘ಆನಂದ್’ ಶುರುವಾದ ದಿನದಂದೇ ಸೆಟ್ಟೇರಿತು ಶಿವಣ್ಣನ ಹೊಸ ಸಿನಿಮಾ ‘ಆರ್ ಡಿ ಎಕ್ಸ್’ !

Pooja Siddaraj

ಕೊರೊನಾ ಮೇಲೆ ಆರ್.ಜಿ.ವಿ ಹಾಡು : ಪ್ರೊಮೋ ನೋಡಿಯೇ ವೈರಸ್ ಸತ್ತುಹೋಗುತ್ತೆ ಎಂದ ಅಭಿಮಾನಿಗಳು

Pooja Siddaraj

ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಸಿನಿಮಾ ಬಗ್ಗೆ ದೊರೆತಿದೆ ಸಖತ್ ಮಾಹಿತಿ

Pooja Siddaraj

ಎರಡು ಸಾರಿ ಆಸ್ಕರ್ ಮುಡಿಗೇರಿಸಿಕೊಂಡಿದ್ದ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಮತ್ತು ಅವರ ಪತ್ನಿಗೂ ಅಂಟಿದೆ ಕೊರೊನಾ ವೈರಸ್!

Pooja Siddaraj

ಐಶ್ವರ್ಯ ರೈ ಅವರನ್ನು ಹೋಲುವ ಮತ್ತೊಬ್ಬ ನಟಿಯನ್ನ ಪರಿಚಯಿಸಿದ್ದು ಯಾರು ?

Pooja Siddaraj

ಮದುವೆಗೆ ತಯಾರಾದ ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ

Pooja Siddaraj

13ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಡೈರೆಕ್ಟರ್ ಪ್ರೇಮ್!

Pooja Siddaraj