ಕೋಟ್ಯಂತರ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ ತಂಡ ಪೈರಸಿ ಆಗುವುದನ್ನು ತಡೆಯಲು ಒಂದು ಉತ್ತಮ ಪರಿಹಾರ ಕಂಡುಕೊಂಡಿದೆಯಂತೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರತಂಡವು ಒಂದು ದೊಡ್ಡ ಐಟಿ ಕಂಪನಿಯ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಆನ್ ಲೈನ್ ನಲ್ಲಿ ಲೀಕ್ ಆಗುವ ಪೈರೇಟೆಡ್ ಪ್ರಿಂಟ್ ಅನ್ನು ಡಿಲಿಟ್ ಮಾಡಲು ನಿಯೋಜಿಸಲಾಗಿತ್ತು.
ಆನ್ ಲೈನ್ ನಲ್ಲಿ ಹುಡುಕಾಟ ನಡೆಸುವ ಐಟಿ ಸಂಸ್ಥೆ ಅದನ್ನು ಎಷ್ಟೇ ಬಾರಿ ಡಿಲಿಟ್ ಮಾಡಿದರೂ ಮತ್ತೆ ಅದನ್ನು ಅಪ್ ಲೋಡ್ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ರಕ್ಷಿತ್ ಶೆಟ್ಟಿ ತಿಳಿಸಿದರು.
