ಬಿಗ್ ಬಾಸ್ ಸೀಸನ್ 7ರ ಫೈನಲ್ ಇಂದು ನಡೆಯಲಿದ್ದು, ಮನೆಯಲ್ಲಿ ಉಳಿದಿರುವ ಮೂವರು ಫೈನಲಿಸ್ಟ್ ಗಳಾದ ಶೈನ್ ಶೆಟ್ಟಿ, ಕುರಿ ಪ್ರತಾಪ್ ಹಾಗೂ ವಾಸುಕಿ ವೈಭವ್ ಅವರ ಪೈಕಿ ಶೈನ್ ವಿನ್ನರ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ವಾಸುಕಿ ವೈಭವ್ ಅವರು ಎಲಿಮಿನೇಟ್ ಆಗಿದ್ದು, ಕುರಿ ಹಾಗೂ ಶೈನ್ ನಡುವೆ ಫೈಟ್ ಇದ್ದು, ಇದರಲ್ಲಿ ಶೈನ್ ವಿಜೇತರಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸುದೀಪ್ ಅವರ ಹಾಟ್ ಫೇವರಿಟ್ ಆಗಿದ್ದ ವಾಸುಕಿ ಅವರು ಹೊರ ಬಂದ ತಕ್ಷಣ ಒಂದು ಕ್ಷಣ ಎಲ್ಲರಿಗೂ ಶಾಕ್ ಆಗಿದೆ ಎನ್ನಲಾಗುತ್ತಿದೆ
