gossip

ಶೃಂಗೇರಿ ಶಾರದಾಂಬೆ ದರ್ಶನ ಪಡೆದ ರಚಿತಾ ರಾಮ್.

ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಇಂದು ಶೃಂಗೇರಿಗೆ ಭೇಟಿ ನೀಡಿ, ಚಾಮುಂಡಿ ತಾಯಿಯ ದರ್ಶನ ಪಡೆದಿದ್ದಾರೆ.ಸದ್ಯ ತೆಲುಗು ಚಿತ್ರದಲ್ಲಿ ಬ್ಯುಸಿಯಾಗಿರುವ ಅವರು ದಿಢೀರ್ ಅಂತ ಶೃಂಗೇರಿಗೆ ಭೇಟಿ ನೀಡಿದ್ದು ಅಚ್ಚರಿ ಮೂಡಿಸಿದೆ.

ಇನ್ನು ಕಳೆದ ಐದು ದಿನಗಳಿಂದ ಶೃಂಗೇರಿ ಶಾರದಾಂಭೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಸಹಸ್ರ ಚಂಡಿಕಾ ಯಾಗ ಮಾಡಿಸುತ್ತಿದ್ದಾರೆ. ಇಂದು ಯಾಗದ ಪೂರ್ಣಾಹುತಿ ಹಿನ್ನೆಲೆಯಲ್ಲಿ ಇಂದು ದೇವೇಗೌಡರ ಇಡೀ ಕುಟುಂಬವೇ ಶೃಂಗೇರಿಯಲ್ಲಿದೆ. ಇದೇ ವೇಳೆ ರಚಿತಾ ರಾಮ್ ಸಹ ಈ ದೇವಸ್ಥಾನಕ್ಕೆ ಬಂದಿರುವುದರಿಂದ ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ನಾನು ಶೃಂಗೇರಿಗೆ ಆಗಮಿಸಿದ್ದಕ್ಕೂ, ದೇವೇಗೌಡರ ಯಾಗಕ್ಕೂ ಸಂಬಂಧವಿಲ್ಲ. ನಾನು ಬಂದಿರುವುದು ಮಾತೆ ಶಾರದಾಂಬೆ ದರ್ಶನಕ್ಕೆ.

ಶೃಂಗೇರಿಯಿಂದ ಹೊರನಾಡಿಗೆ ಹೋಗುತ್ತಿದ್ದೇನೆ,’ ಎಂದು ರಚಿತಾ, ಹರಡುತ್ತಿರುವ ಕೆಲವು ಗುಸುಗುಸುಗಳಿಗೆ ಪ್ರತಿಕ್ರಿಯಿಸಿದ್ದಾರೆ. ಸದ್ಯ ಶೃಂಗೇರಿಯ ದೇವಸ್ಥಾನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ, ಅನಿತಾ ಕುಮಾರಸ್ವಾಮಿ, ಹೆಚ್.ಡಿ ಬಾಲಕೃಷ್ಣ ಸೇರಿದಂತೆ ಅನೇಕರು ಪೂಜೆ ಮಾಡಿಸುತ್ತಿದ್ದಾರೆ.

Trending

To Top