Food

ಶುಚಿಯಾದ ರುಚಿಯಾದ ಮೈಸೂರ್ ಪಾಕ್ ಮಾಡುವ ವಿಧಾನ

ಮೈಸೂರ್ ಪಾಕ್, ಹೆಸರು ಕೇಳ್ತಿದ್ರೇನೇ ಎಲ್ಲರ ಬಾಯಲ್ಲಿ ನೀರೂರುತ್ತದೆ. ಈ ಸಿಹಿ ತಿಂಡಿ ಸೃಷ್ಟಿಯಾಗಿದ್ದು ಮೈಸೂರಿನಲ್ಲಾದರೂ ವಿಶ್ವಾದ್ಯಂತ ಬಹಳ ಜನಪ್ರಿಯ. ಇಂತಹ ವಿಶೇಷವಾದ ಸಿಹಿ ತಿಂಡಿಯನ್ನು ಮನೆಯಲ್ಲೇ ತಯಾರಿಸುವ ವಿಧಾನವನ್ನು ತಿಳಿಯೋಣ…

ಬೇಕಾಗುವ ಪದಾರ್ಥಗಳು :-
1. ಒಂದು ಕಪ್ ಕಡಲೆ ಹಿಟ್ಟು
2. ಸಕ್ಕರೆ ( ಅಭಿರುಚಿಗೆ ತಕ್ಕಂತೆ ಒಂದು ಅರ್ಧ ಕಪ್ ಅಥವಾ ಎರಡು ಕಪ್ )
3. ಒಂದು ಕಪ್ ತುಪ್ಪ ಮತ್ತು ಒಂದು ಕಪ್ ಎಣ್ಣೆ

ಮಾಡುವ ವಿಧಾನ :-

ಎಣ್ಣೆ ಮತ್ತು ತುಪ್ಪ ಎರಡನ್ನು ಸ್ವಲ್ಪ ಬಿಸಿ ಮಾಡಿ, ಎರಡನ್ನೂ ಮಿಶ್ರಣ ಮಾಡಿ.

ಮೈಸೂರ್ ಪಾಕ್ ತ್ಯಾರಿಕೆಯನ್ನು ಶುರುಮಾಡುವ ಮೊದಲು ಒಂದು ಅಲ್ಯೂಮಿನಿಯಂ ಧಾರಕಕ್ಕೆ ತುಪ್ಪವನ್ನು ಸವರಿ ಇಡಬೇಕು.

ನಾನ್ ಸ್ಟಿಕ್ ಪ್ಯಾನ್ ಗೆ ಎರಡು ಕಪ್ ಸಕ್ಕರೆ ಹಾಕಿ, ಒಂದೆಳೆ ಪಾಕ ಆಗುವವರೆಗೂ ಕುದಿಸಿ. ಹೆಚ್ಚಾಗಿ ಕುದಿಸಬಾರದು. ಈ ಸಕ್ಕರೆ ಪಾಕಕ್ಕೆ ಒಂದು ಕಪ್ ಕಡಲೆ ಹಿಟ್ಟನ್ನು ಸೇರಿಸಿ ಗಂಟು ಬರದಂತೆ ಚೆನ್ನಾಗಿ ಕಲಸಿ..

ಸಣ್ಣದಾದ ಬಬಲ್ ಗಳು ಬರಲು ಆರಂಭಿಸಿದಾಗ, ಎಣ್ಣೆ ಮತ್ತು ತುಪ್ಪವನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಬೇಕು, ಪ್ಯಾನ್ ಒಳಗಿರುವ ಮಿಶ್ರಣ ಎಣ್ಣೆ ತುಪ್ಪವನ್ನು ಹೀರಿಕೊಳ್ಳಬೇಕು. ಇದೇ ಪ್ರಕ್ರಿಯೆಯನ್ನು ಎಣ್ಣೆ ಮತ್ತು ತುಪ್ಪ ಪ್ಯಾನ್ ನ ಅಂಚನ್ನು ಬಿಡುವವರೆಗೂ ಮತ್ತು ಮಿಶ್ರಣ ನಯವಾಗಿ ಕಾಣುವವರೆಗೂ ಇದೇ ಪ್ರಕ್ರಿಯೆ ಅನುಸರಿಸಬೇಕು.

ನಂತರ ಈ ಮಿಶ್ರಣವನ್ನು ಮತ್ತೊಂದು ಧಾರಕಕ್ಕೆ ಹಸ್ತಾಂತರಿಸಬೇಕು. ಮತ್ತು ನಯವಾಗಿ ಧಾರಕದ ಮೇಲೇ ಟ್ಯಾಪ್ ಮಾಡಬೇಕು. ಆದರೆ ಹೆಚ್ಚಾಗಿ ಒತ್ತಬಾರದು.

ಇದನ್ನು 20 ನಿಮಿಷ ಹಾಗೆಯೇ ಬಿಡಬೇಕು. ನಂತರ ಒಂದು ಕತ್ತಿಯ ಸಹಾಯದಿಂದ ಧಾರಕದ ಮೇಲೆ ಇಷ್ಟವಾದ ಆಕಾರದಲ್ಲಿ ಗುರುತು ಮಾಡಬೇಕು. ಸುಮಾರು ಒಂದು ಘಂಟೆಯ ನಂತರ ಗುರುತು ಮಾಡಿರುವ ಆಕಾರಗಳನ್ನು ಕತ್ತಿಯ ಸಹಾಯದಿಂದ ಆಳವಾಗಿ ಕತ್ತರಿಸಬೇಕು. ಎರಡರಿಂದ ಮೂರು ಗಂಟೆಗಳ ಕಾಲ ಇದನ್ನು ಹಾಗೆಯೇ ಬಿಡಬೇಕು.

ನಂತರ ಧಾರಕದಿಂದ ಇದನ್ನು ಬೇರ್ಪಡಿಸಿ, ನಯವಾಗಿ ಕತ್ತಿಯಿಂದ ಕಟ್ ಮಾಡಿದರೆ ಮೈಸೂರ್ ಪಾಕ್ ನ ಪೀಸ್ ಗಳು ಬಿಡಿಬಿಡಿಯಾಗುತ್ತವೆ.

ರೆಸಿಪಿ ಕ್ರೆಡಿಟ್ಸ್ : ಡಾ.ನೇತ್ರಾ.ಎನ್.ಎಸ್.

Trending

To Top