News

ಶೀತಲ್ ಶೆಟ್ಟಿ ‘ವಿಂಡೋ ಸೀಟ್’ ಏರಿದ ನಿರೂಪ್

ಸಂಗಾತಿ, ಕಾರ್ ನಂತಹಾ ಕಿರುಚಿತ್ರಗಳನ್ನು ನಿರ್ದೇಶಿಸಿದ ನಂತರ, ನಿರ್ದೇಶಕಿಯಾಗಿ ಬದಲಾದ ಆಂಕರ್ ಶೀತಲ್ ಶೆಟ್ಟಿ ಈಗ ಹಿರಿತೆರೆಯತ್ತ ಹೊರಳಲು ಸಿದ್ದವಾಗಿದ್ದಾರೆ. ಶೀತಲ್ ತಾವು ನಿರ್ದೇಶಿಸುವ ಚೊಚ್ಚಲ ಚಿತ್ರಕ್ಕೆ “ವಿಂಡೋ ಸೀಟ್” ಎಂದು ಣಾಮಕರಣ ಂಆಡಿದ್ದು ಇದರಲ್ಲಿ “ರಂಗಿತರಂಗ” ಖ್ಯಾತಿಯ ನಿರೂಪ್ ಭಂಡಾರಿ ಮುಖ್ಯ ಪಾತ್ರದಲ್ಲಿದ್ದಾರೆ.

ಶೂಟಿಂಗ್ ಪ್ರಕ್ರಿಯೆಯ ಬಗ್ಗೆ ಇನ್ನೂ ಯಾವ ಮಾಹಿತಿಯನ್ನೂ ಬಹಿರಂಗಪಡಿಸಲು ಚಿತ್ರತಂಡ ಬಯಸಿಲ್ಲವಾದರೂ ಚಿತ್ರ ರೋಮ್ಯಾಂಟಿಕ್ ಥ್ರಿಲ್ಲರ್ ಕಥಾನಕವನ್ನು ಹೊಂದಿದೆ ಎನ್ನುವುದು ತಿಳಿದುಬಂದಿದೆ. ಅಲ್ಲದೆ ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿದೆ ಎನ್ನುವ ಮಾಹಿತಿ ಸಿಕ್ಕಿದೆ.

ನಿರೂಪ್ ಭಂಡಾರಿತಮ್ಮ ಸಹೋದರ ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು.

ಇದಲ್ಲದೆ ಅನೂಪ್ ಮುಂಬರುವ ಯೋಜನೆ “ಫ್ಯಾಂಟಂ” ನಲ್ಲಿ ಸಹ ನಿರೂಪ್ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಅವರು ಪ್ರಮುಖ ನಾಯಕ ಸುದೀಪ್ ಅವರೊಂದಿಗೆ ತೆರೆ ಹಂಚಿಕೊಳ್ಲಲಿದ್ದಾರೆ ಎನ್ನಲಾಗಿದೆ. ಈ ನಡುವೆ ಪ್ರಸಿದ್ದ ನಿರೂಪಕಿಯಾಗಿದ್ದ ಶೀತಲ್ರಕ್ಷಿತ್ ಶೆಟ್ಟಿಯ ಉಳಿದವರು ಕಂಡ್ಂತೆ ಚಿತ್ರದ ಮುಖೇನ ಬೆಳ್ಳಿತೆರೆಯತ್ತ ಸಾಗಿ ಬಂದಿದ್ದರು. ಆ ನಂತರ ಸೂರಿ ನಿರ್ದೇಶನದ “ಕೆಂಡಸಂಪಿಗೆ”, ಪ್ರೀಥಮ್ ಗುಬ್ಬಿಯ 96 ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. ಅಲ್ಲದೆ “ಪತಿಬೇಕು ಡಾಟ್ ಕಾಂ”ನಲ್ಲಿ ಕಾಣಿಸಿಕೊಂಡಿದ್ದ ನಟಿ ಇತ್ತೀಚಿನ ಚಿತ್ರ “ಗಡಿಯಾರ” ಇನ್ನೂ ತೆರೆ ಕಂಡಿಲ್ಲ.

Trending

To Top