Film News

ಶಿವರಾತ್ರಿ ಹಬ್ಬಕ್ಕೆ ಕೋಟಿಗೊಬ್ಬ 3 ಟೀಸರ್!

ಶಿವ​ಕಾ​ರ್ತಿಕ್‌ ನಿರ್ದೇ​ಶ​ನದ, ಸೂರಪ್ಪ ಬಾಬು ನಿರ್ಮಾ​ಣದ ಬಹು ನಿರೀ​ಕ್ಷೆಯ ‘ಕೋಟಿ​ಗೊಬ್ಬ 3’ ಚಿತ್ರದ ಬೈಕ್‌ ಟೀಸರ್‌ ಫೆ.21ರಂದು ಮಧ್ಯಾಹ್ನ 12ಗಂಟೆಗೆ ಬಿಡು​ಗಡೆ ಆಗು​ತ್ತಿದೆ. ಬೈಕ್‌ ರೇಸ​ರ್‌​ನಂತೆ ಬೈಕ್‌ ಮೇಲೆ ಕೂತು ಟೀಸ​ರ್‌​ನಲ್ಲಿ ಸುದೀಪ್‌ ಎಂಟ್ರಿ ಆಗು​ವುದು ವಿಶೇಷ ಎನ್ನು​ತ್ತಾರೆ ನಿರ್ದೇ​ಶ​ಕರು.

ಚಿತ್ರದಲ್ಲಿ ಸುದೀಪ್‌ ಅವ​ರಿಗೆ ಮಲ​ಯಾಳಿ ಬೆಡಗಿ ಮಡೋನ್ನಾ ಸೆಬಾ​ಸ್ಟಿಯನ್‌ ನಾಯ​ಕಿ​ಯಾಗಿ ನಟಿ​ಸಿ​ದ್ದಾರೆ. ತೆಲು​ಗಿನ ಶ್ರದ್ಧಾ ದಾಸ್‌ ಬಹು ಮುಖ್ಯ​ವಾದ ಪಾತ್ರ ಮಾಡಿ​ದ್ದಾರೆ. ಬೇರೆ ಬೇರೆ ದೇಶ​ಗ​ಳಲ್ಲಿ ಚಿತ್ರೀ​ಕ​ರ​ಣ ಮಾಡಿದ್ದು, ಶೂಟಿಂಗ್‌ ಮುಕ್ತಾ​ಯ​ಗೊಂಡಿದೆ. ಸದ್ಯಕ್ಕೆ ಪೋಸ್ಟ್‌ ಪ್ರೊಡ​ಕ್ಷನ್‌ ಹಂತ​ದ​ಲ್ಲಿ​ರುವ ಈ ಚಿತ್ರದ ಟೀಸರ್‌ ಹೇಗಿ​ರು​ತ್ತದೆ ಎನ್ನುವ ಕುತೂ​ಹ​ಲ​ವಂತೂ ಇದ್ದೇ ಇರು​ತ್ತದೆ.

ಕಿಚ್ಚನ ಅಭಿ​ಮಾ​ನಿ​ಗ​ಳ ಈ ನಿರೀ​ಕ್ಷೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡೇ ನಿರ್ದೇ​ಶಕ ಶಿವ​ಕಾ​ರ್ತಿಕ್‌ ಟೀಸರ್‌ ರೂಪಿ​ಸು​ತ್ತಿ​ದ್ದಾ​ರಂತೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನ​ಲ್‌​ನಲ್ಲಿ ಶಿವ​ರಾ​ತ್ರಿ​ಯಂದು ಟೀಸರ್‌ ಅನಾ​ವ​ರ​ಣ​ಗೊ​ಳ್ಳ​ಲಿದೆ.

Trending

To Top