Cinema

ಶಿವಣ್ಣ ಮನೆಯಲ್ಲಿ ಕನ್ನಡದ ಎಲ್ಲಾ ಸ್ಟಾರ್ ಗಳು! ಆದರೆ ಕಿಚ್ಚ ಹಾಗು ದರ್ಶನ್ ಮಿಸ್ಸಿಂಗ್, ವಿಡಿಯೋ ನೋಡಿ

ಕರೊನಾ ಇಂದಾಗಿ ಚಿತ್ರರಂಗದಲ್ಲಿ ಬಹಳ ಸಮಸ್ಯೆ ಎದುರಾಗಿದೆ. ಚಿತ್ರರಂಗವನ್ನೇ ನಂಬಿಕೊಂಡಿದ್ದ ಅದೆಷ್ಟೋ ಕುಟುಂಬಗಳು ಸಿನಿಮಾ ಕೆಲಸಗಳು ನಿಂತಿರುವುದರಿಂದ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಹಾಗಿದೆ. ಹಾಗೂ ಕಳೆದ ಐದು ತಿಂಗಳಿನಿಂದ ಚಿತ್ರಮಂದಿರಗಳು ಮುಚ್ಚಿರುವ ಕಾರಣ ಥಿಯೇಟರ್ ಓನರ್ ಗಳಿಗೂ ಸಹ ಸಮಸ್ಯೆ ಆಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲು, ಚಿತ್ರರಂಗದ ಮುಂದಾಳತ್ವ ವಹಿಸಿ, ಸರ್ಕಾರದ ಜೊತೆ ಚರ್ಚಿಸಲು ಒಬ್ಬ ಪ್ರಬಲವಾದ ವ್ಯಕ್ತಿ ಬೇಕಿತ್ತು. ಎಲ್ಲರೂ ಸೇರಿ ಆ ಸ್ಥಾನಕ್ಕೆ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ.ಶಿವ ರಾಜ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಸ್ಕ್ರಾಲ್ ಡೌನ್ ಮಾಡಿ ಇದರ ವಿಡಿಯೋ ನೋಡಿ
ಮೇಲೆ ಪ್ರಸ್ತಾಪಿಸಿದ ಚಿತ್ರರಂಗದ ಸಿಬ್ಬಂದಿಗಳು, ಕೆಲಸಗಾರರು ಹಾಗೂ ಚಿತ್ರಮಂದಿರಗಳ ಓನರ್ ಗಳು, ಅಲ್ಲಿನ ಕೆಲಸಗಾರರು ಹಾಗೂ ಜಿಮ್ ಓನರ್ ಗಳ ಕಷ್ಟ ಮತ್ತು ಜಿಮ್ ಗಳನ್ನು ತೆರೆಯುವ ಬಗ್ಗೆ ನಟ ಶಿವ ರಾಜ್ ಕುಮಾರ್ ಅವರ ಮನೆಯಲ್ಲಿ ಎಲ್ಲರ ಸಮ್ಮುಖದಲ್ಲಿ ನಿನ್ನೆ ಸಭೆ ನಡೆದಿದೆ. ಸಭೆಯಲ್ಲಿ, ಸಚಿವರಾದ ಸಿ.ಟಿ.ರವಿ ಹಾಗೂ ಪುನೀತ್ ರಾಜ್ ಕುಮಾರ್, ರವಿಚಂದ್ರನ್, ರಕ್ಷಿತ್ ಶೆಟ್ಟಿ, ಉಪೇಂದ್ರ, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ಯಶ್, ರಮೇಶ್ ಅರವಿಂದ್, ಶ್ರೀಮುರಳಿ, ಗಣೇಶ್ ಹಾಗೂ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಕಾರ್ತಿಕ್ ಗೌಡ, ಸೂರಪ್ಪ ಬಾಬು ಸೇರಿದಂತೆ ಇನ್ನು ಕೆಲವು ಗಣ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯ ನಂತರ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಅವರು ಚಿತ್ರರಂಗದ ಪುನಶ್ಚೇತನ ಹಾಗೂ ಥಿಯೇಟರ್ ಓನರ್ ಮತ್ತು ಜಿಮ್ ಓನರ್ ಗಳ ಸಮಸ್ಯೆ ಬಗ್ಗೆ ಕನ್ನಡ ಚಿತ್ರರಂಗದ ನಟರು ಹಾಗೂ ನಿರ್ಮಾಪಕ ನಿರ್ದೇಶಕರ ಜೊತೆ ಚರ್ಚೆ ನಡೆಸಿದ್ದು, ಕೆಲಸ ನಡೆಯದೆ ಸಿನಿಕಾರ್ಮಿಕರಿಗೆ, ಪ್ರದರ್ಶನ ನಿಂತಿರುವುದರಿಂದ ಥಿಯೇಟರ್ ಮಾಲೀಕರು ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಹಾಗೂ ಜಿಮ್ ಓನರ್ ಗಳ ಕಷ್ಟದ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು, ಸಿಎಂ ಜೊತೆ ಚರ್ಚಿಸಿ ಉದ್ಯಮವನ್ನು ನಂಬಿರುವವರಿಗೆ ವಿಶೇಷ ಪ್ಯಾಕೇಜ್ ಹಾಗೂ ಚಿತ್ರೋದ್ಯಮ ಪುನಶ್ಚೇತನಕ್ಕೆ ಸಹಕಾರ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವರಾದ ಸಿ.ಟಿ.ರವಿ ಅವರು ತಿಳಿಸಿದ್ದಾರೆ.ಚಿತ್ರಮಂದಿರ ಮತ್ತು ಜಿಮ್ ಗಳನ್ನು ಪುನರಾರಂಭ ಮಾಡುವುದು ಕೇಂದ್ರ ಸರ್ಕಾರದಿಂದ ಬರುವ ಮಾರ್ಗಸೂಚಿಗಳ ಮೇಲೆ ಅವಲಂಬನೆ ಆಗಿರುತ್ತದೆ. ಕೇಂದ್ರ ಸರ್ಕಾರದ ನಿರ್ಧಾರದ ಮೇಲೆ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಚಿತ್ರಮಂದಿರದವರು ಭೇಟಿ ಮಾಡಿ ಮಾತನಾಡಿದ್ದಾರೆ. ಇದರ ಬಗ್ಗೆ ಕೂಡ ಸಿಎಂ ಅವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇವೆ. ಚಿತ್ರೋದ್ಯಮದ ಬಗ್ಗೆ ನಮಗೂ ಕಾಳಜಿ ಇದೆ ಎಂದು ಹೇಳಿದ್ದರೆ.

Trending

To Top