Film News

ಶಿವಣ್ಣ ಚಂದನವನಕ್ಕೆ ಬಂದು 34 ವರ್ಷ!

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ನಾಳೆಗೆ 34 ವರ್ಷಗಳಾಗಲಿದೆ. ಅಂದರೆ 1986ರಲ್ಲಿ ಆನಂದ್ ಚಿತ್ರದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಶಿವರಾಜ್‌ಕುಮಾರ್ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರನ್ನ ರಂಜಿಸಿದ್ದಾರೆ. ಇಲ್ಲಿಯವರೆಗೂ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದು ಯಶಸ್ವಿ ನಾಯಕ ನಟನೆಂದು ಹೆಸರು ಮಾಡಿದ್ದಾರೆ. ಸದ್ಯ ಭಜರಂಗಿ-2 ಚಿತ್ರದಲ್ಲಿ ಶಿವಣ್ಣ ನಟಿಸ್ತಿದ್ದಾರೆ. ಇದೇ ಖುಷಿಯಲ್ಲಿ ಶಿವರಾಜ್‌ಕುಮಾರ್ ಅಭಿಮಾನಿಗಳು 34ನೇ ವರ್ಷದ ಸಂಭ್ರಮ ಆಚರಿಸುತ್ತಿದ್ದಾರೆ.

ಶಿವರಾಜ್‌ಕುಮಾರ್ ನಟಿಸಿದ್ದ ಮೇಯರ್ ಮುತ್ತಣ್ಣ ಚಿತ್ರದ ಫೋಟೋವೊಂದನ್ನ ಅಭಿಮಾನಿಗಳು ಕಾಮನ್ ಡಿ ಪಿ ಮಾಡಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ #34YearsOfInspirationCDP ಬಳಸಿ ವೈರಲ್ ಮಾಡ್ತಿದ್ದಾರೆ.

ಇನ್ನು ಈ ಕುರಿತು ನಿರ್ದೇಶಕ ಸಿಂಪಲ್ ಸುನಿ ಶಿವರಾಜ್‌ಕುಮಾರ್‌ಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.

Trending

To Top