Cinema

ಶಿವಣ್ಣನ ಭಜರಂಗಿ 2 ನ ಹೊಸ ಪೋಸ್ಟರ್ ನಲ್ಲಿ ಅಡಗಿದೆ ಒಂದು ರಹಸ್ಯ!ಎನ್ ಗೊತ್ತಾ? ನಿಜಕ್ಕೂ ಅಚ್ಚರಿಯಾಗುತ್ತದೆ

ಡಾಕ್ಟರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಚಿತ್ರದ ಫಸ್ಟ್ ಲೂಕ್ ಪೋಸ್ಟರ್ ಬಿಡುಗಡೆ ಆಗಿದೆ. ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಎ. ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಭಜರಂಗಿ ಭಾಗ-2 ಚಿತ್ರದ ಎರಡನೇ ಪೋಸ್ಟರ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನ ಖಡಕ್ಕಾಗಿ ತೋರಿಸಲಾಗಿದೆ. ಈ ಹೊಸ ಪೋಸ್ಟರನ್ನು ನೋಡಿದ ತಕ್ಷಣ ಫಸ್ಟ ರಿಯಾಕ್ಷನ್ ಅಂತು “ವಾಹ್” ಅಂತ. ಯಾಕೆಂದ್ರೆ ಶಿವಣ್ಣ ಅವರ ಖಡಕ್ ಲೂಕ್ ಇರಬಹುದು, ಆ ಪೋಸ್ಟರ್ ಕ್ರಿಯೇಟಿವಿಟಿ ವರ್ಕ್ ಇರಬಹುದು, ಒಂದು ಫ್ಯಾಂಟಸಿ ನೋಡಬಹುದು, ಏನೋ ಒಂದು ರೀತಿ ಈ ಒಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿರುವ ಈ ಒಂದು ಲುಕ್ ನಲ್ಲಿ ಶಿವಣ್ಣ ಅವರ ಕೆರಳಿದ ಕಣ್ಣುಗಳು ಭಜರಂಗಿಯನ್ನು ಪ್ರತಿಬಿಂಬಿಸುತ್ತವೆ ಅಂತ ಹೇಳಿದರೂ ಕೂಡ ತಪ್ಪಾಗುವುದಿಲ್ಲ.
ಭಜರಂಗಿ 2 ನ ಫಸ್ಟ್ ಲುಕ್ ಪೋಸ್ಟರ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಇದೀಗ ಶಿವಣ್ಣವರ ಈ ಒಂದು ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಪೋಸ್ಟರ್ ನಲ್ಲಿ ಬಳ್ಳಿಯಿಂದ ಬಂಧಿಸಲ್ಪಟ್ಟ ಜನಿವಾರ ವೇಷದಾರಿ ಕೂಡ ಇದ್ದು, ಸಂಕಷ್ಟದಿಂದ ಬೆಳಕಿನಡೆಗೆ ನೋಡುತ್ತಿರುವ ಸಂದರ್ಭದಲ್ಲಿ ಭಜರಂಗಿ ಕಾಣಿಸುತ್ತಿರುವ ಅಂತೆ ಪೋಸ್ಟರ್ ಅನ್ನು ಡಿಸೈನ್ ಮಾಡಲಾಗಿದೆ. ಈ ಪೋಸ್ಟರ್ ನ ಒಂದು ವಿಶೇಷತೆಯೆಂದರೆ, ಅವರು ಮಾಡಿರುವ ಒಂದು ಖಡಕ್ ಕಾಂಬಿನೇಷನ್ ಇರಬಹುದು, ಅಥವಾ ಅದಕ್ಕೆ ಕೊಟ್ಟಿರುವ ಲೈಟ್ ಇರಬಹುದು, ಶಿವರಾಜ್ ಕುಮಾರ್ ಅವರ ಕಣ್ಣುಗಳು ಇರಬಹುದು, ಆ ಕಣ್ಣಿನಲ್ಲಿರುವ ಒಂದು ಕಾನ್ಫಿಡೆನ್ಸ್ ಇರಬಹುದು, ಅವರು ಕಣ್ಣುಗಳು ಒಂದು ರೀತಿಯ ಕಥೆಯನ್ನು ಹೇಳುವ ಹಾಗೆ ಒಂದು ರೀತಿಯ ವಿಭಿನ್ನವಾದ ಪೋಸ್ಟರ್ ಡಿಸೈನ್ ಮಾಡಿದ್ದಾರೆ.

Trending

To Top