Film News

ಶಿಲ್ಪಾ ಶೆಟ್ಟಿ ಹಾಡೊಂದನ್ನು ಹಾಡಿದಾಗ ಅವರ ಪತಿಯ ಪ್ರತಿಕ್ರಿಯೆ ಹೇಗಿತ್ತು ನೋಡಿ…

ನಟಿ ಶಿಲ್ಪಾ ಶೆಟ್ಟಿ ಲಾಕ್ ಡೌನ್ ಇರಲಿ ಇಲ್ಲದೇ ಇರಲಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುತ್ತಾರೆ. ಆದರೆ ಈಗಂತೂ ಸಿನಿಮಾ, ಚಿತ್ರೀಕರಣ ಹಾಗೂ ರಿಯಾಲಿಟಿ ಶೋ ಕಾರ್ಯಕ್ರಮಗಳು ಇಲ್ಲದೇ ಇರುವ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಮತ್ತಷ್ಟು ಆಕ್ಟೀವ್ ಆಗಿದ್ದಾರೆ.

ಟಿಕ್ ಟಾಕ್ ನಲ್ಲಿ ಈಗಾಗಲೇ 15 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಶಿಲ್ಪಾ ದಿನಕ್ಕೊಂದು ವಿಡಿಯೋವನ್ನಾದರೂ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇನ್ನು ಈ ನಟಿಯ ವಿಡಿಯೋಗಳಿಗೆ ಅಷ್ಟೇ ವೀಕ್ಷಣೆಯೂ ಸಿಗುತ್ತದೆ. ಮನೆಯಲ್ಲಿ ದಿನಕ್ಕೊಂದು ಪ್ರಯೋಗಗಳನ್ನು ಮಾಡುವ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಗಂಡನಿಗಾಗಿ ಹಾಡು ಹಾಡಿದ್ದಾರೆ. ನೆಚ್ಚಿನ ಮಡದಿ ಹಾಡಿದ ಹಾಡು ಕೇಳಿ ಕುಳಿತಲ್ಲೇ ಕುಸಿದು ಬಿದ್ದ ರಾಜ್ ಕುಂದ್ರಾ ವಿಲವಿಲ ಒದ್ದಾಡಿದ್ದಾರೆ. ಟಿಕ್ ಟಾಕ್ ನಲ್ಲಿ ಹಾಡನ್ನು ಹಾಡಿರುವ ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

https://www.instagram.com/p/B_M5byrh3Vp/?igshid=gq1hssc26d2s

Trending

To Top