News

ವೀಕ್ಷಕರಿಗೆ ಸಿಹಿ ಸುದ್ದಿ ಕೊಟ್ಟ ಜೊತೆಜೊತೆಯಲಿ ಧಾರವಾಹಿ ತಂಡ.. ಏನದು?

ಕೋಟೆನಾಡು ಚಿತ್ರದುರ್ಗದಲ್ಲಿ ಇಂದು ಜೊತೆಜೊತೆಯಲಿ ಧಾರಾವಾಹಿಯ ಜಾತ್ರೆ ನಡೆಯಲಿದ್ದು, ಸಾಹಸ ಸಿಂಹ ವಿಷ್ಣುವರ್ಧನ್ ವೃತ್ತಿ ಜೀವನ ಆರಂಭವಾದ ಚಿತ್ರದುರ್ಗದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂದು ಸಂಜೆ 5.30ಕ್ಕೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಜಾತ್ರೆ ನಡೆಯಲಿದ್ದು, ಧಾರಾವಾಹಿಯ ತಂಡ ಈಗಾಗಲೇ ಅಲ್ಲಿ ಬೀಡುಬಿಟ್ಟಿದೆ.

ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು, ಜೊತೆಗೆ ಉಳಿದ ಕಲಾವಿದರುಗಳು ಕಾರ್ಯಕ್ರಮ ನೀಡಲು ತಯಾರು ಮಾಡಿಕೊಂಡಿದ್ದಾರೆ. ಈಗಾಗಲೇ ಈ ವಿಷಯ ಕಿರುತೆರೆ ವೀಕ್ಷಕರಿಗೆ ತಿಳಿದಿದ್ದು ಅದ್ಯಾವಾಗ ಚಾನೆಲ್ ನಲ್ಲಿ ಪ್ರಸಾರವಾಗಲಿದೆ ಎಂದು ಕಾಯುತ್ತಿದ್ದಾರೆ.

Trending

To Top