Tv Shows

ವೀಕೆಂಡ್ ನಲ್ಲಿ ಮತ್ತೆ ಬರಲಿದ್ದಾರೆ ರೆಬೆಲ್ ಸ್ಟಾರ್ ಮತ್ತು ಅಭಿನಯ ಚಕ್ರವರ್ತಿ !

ಅಭಿನಯ ಚಕ್ರವರ್ತಿ, ಚಂದನವನದ ಪೈಲ್ವಾನ್ ಅಂತ ಕರೆಸಿಕೊಳ್ಳುವ ಕಿಚ್ಚ ಸುದೀಪ್ ತಮ್ಮ ಆರಂಭದ ದಿನಗಳಲ್ಲಿ ಪಟ್ಟ ಕಷ್ಟ ಮಾತ್ರ ಹೇಳತೀರದು, ಕಿಚ್ಚನ ನೆನಪಿನ‌ ಆಟೋಗ್ರಾಫ್ ಮಾತ್ರ ಸುಪರ್.ತಮ್ಮ ಜೀವನದ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಹೇಳಿಕೊಂಡಿಲ್ಲಾ, ಆದ್ರೆ ಜೀ಼ ಕನ್ನಡ ವಾಹಿನಿಯ ಪ್ರಸಿದ್ಧ ಶೋ ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ಸುದೀಪ್ ತಮ್ಮ ಜೀವನದ ಖುಷಿಯ ಕ್ಷಣಗಳನ್ನ ನೆನೆದು ಖುಷಿ ಪಟ್ರು, ಹಾಗೆ ತಮ್ಮ ಕಡು ಕಷ್ಟದ ದಿನಗಳನ್ನ ನೆನೆದು ಭಾವುಕರಾಗಿದ್ರು ಮೊದಲ ಸಿನಿಮಾ ರಿಲೀಸ್ ಬಗ್ಗೆ ಹಾಗೆ ಹುಚ್ಚ ಸಿನಿಮಾದ ಮೆಗಾ ಹಿಟ್ ಬಗ್ಗೆ, ಕೆಲ ಸಿನಿಮಾಗಳು ಸೋತಾಗ ಚಿತ್ರರಂಗ ಅವ್ರನ್ನ ಐರನ್ ಲೆಗ್ ಅಂದಿದ್ದರ ಬಗ್ಗೆ ವಿವರಸಿ ಹೇಳಿದ್ರು, ತಮ್ಮ ಹಳೆಯ ಗೆಳೆಯರನ್ನ ನೋಡಿ ಖುಷಿ ಪಟ್ಟಿದ್ರು ಕಿಚ್ಚನ‌ ಜೀವನದ ಆಟೋಗ್ರಾಫ್ ನೋಡುವ ಸುವರ್ಣಾವಕಾಶ ಈಗ ಮತ್ತೊಮ್ಮೆ ನಿಮ್ಮದಾಗಿದೆ. ಭಾನುವಾರ ಮಧ್ಯಾಹ್ನ,ಸುದೀಪ್ ಭಾಗವಹಿಸಿದ್ದ ವೀಕೆಂಡ್ ವಿತ್ ರಮೇಶ್ ಎಪಿಸೋಡ್ ಜೀ಼ ಕನ್ನಡ ವಾಹಿನಿ ಮರು ಪ್ರಸಾರ ಮಾಡಲಿದೆ.

46 ವರ್ಷಗಳ ಬಣ್ಣದ ಬದುಕಿನಲ್ಲಿ, 250 ಚಿತ್ರಗಳಲ್ಲಿ ಅಭಿನಯ. ‘ನಾಗರಹಾವು’ ಚಿತ್ರದ ಖಳನಾಯಕನ ಪಾತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ(ಪುಟ್ಟಣ್ಣ ಕಣಗಾಲ್‌ ಗರಡಿಯಲ್ಲಿ ಪಳಗಿದ ಪ್ರತಿಭೆ) ‘ಅಂತ’ ಚಿತ್ರದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರ. ಇದು ಅಭಿಮಾನಿಗಳ ಮನೆಸೆಳೆದ ಪಾತ್ರ. ‘ಚಕ್ರವ್ಯೂಹ’ದಂಥ ಚಿತ್ರಗಳ ಮೂಲಕ ರೆಬಲ್‌ ಸ್ಟಾರ್‌ ಎಂಬ ಬಿರುದು ಪಡೆದವರು.

ಭ್ರಷ್ಟ ರಾಜಕೀಯ ವ್ಯವಸ್ಥೆ ವಿರುದ್ಧ ತಮ್ಮ ಚಿತ್ರಗಳಲ್ಲಿ ಸಮರ ಸಾರಿದವರು, ಅಂಬರೀಷ್‌. ಚಕ್ರವ್ಯೂಹ, ಅಂತ, ಅಂತ(ಭಾಗ-2), ನ್ಯೂಡೆಲ್ಲಿ, ಏಳು ಸುತ್ತಿನ ಕೋಟೆ, ರಂಗನಾಯಕಿ, ಟೋನಿ, ರಾಣಿ ಮಹಾರಾಣಿ, ಮಣ್ಣಿನ ದೋಣಿ, ಮುಂಜಾನೆ ಮಂಜು, ಒಡಹುಟ್ಟಿದವರು(ರಾಜ್‌ ಕುಮಾರ್‌ ಸಹೋದರನಾಗಿ ಅಭಿನಯ) ಮತ್ತಿತರ ಚಿತ್ರಗಳಲ್ಲಿ ಸ್ಮರಣೀಯ ಅಭಿನಯ.

ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮೀಣ ಜಿಲ್ಲೆಗಳಲ್ಲಿ ಅಂಬಿ ಎಂದರೇ ಎಲ್ಲರಿಗೂ ಪ್ರಾಣ.ಕನ್ನಡ ಚಿತ್ರರಂಗದ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ಅವರು ಇಂದು ನಮ್ಮೊಂದಿಗಿಲ್ಲ.ಮಳವಳ್ಳಿ ಹುಚ್ಚೇ ಗೌಡ ಅಮರನಾಥ್ ಅಂಬರೀಶ್ ಆದ ರೋಮಾಂಚಕ ಕಥೆಯನ್ನ ಇದೇ ಶನಿವಾರ ವಿಕೆಂಡ್ ವಿತ್ ರಮೇಶ್ ಶೋನ ಮರುಪ್ರಸಾರದಲ್ಲಿ ನೋಡಿ ನಿಮ್ಮ ಲಾಕ್ ಡೌನ್ ಸಮಯವನ್ನ ಎಂಜಾಯ್ ಮಾಡಿ ಏಪ್ರಿಲ್ 18 2020ರ ಶನಿವಾರ ಮಧ್ಯಾಹ್ನ 1 ಗಂಟೆಗೆ ರೆಬಲ್‌ ಸ್ಟಾರ್‌ ಅಂಬರೀಶ್ ಎಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಕಿಚ್ಚ ಸುದೀಪ್ ಎಪಿಸೋಡ್ ಪ್ರಸಾರವಾಗಲಿದೆ.

Trending

To Top