Film News

ವಿಷ್ಣುವರ್ಧನ್-ಎಸ್.ಪಿ.ಬಿ ಸ್ನೇಹದ ನಂಟು

ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರ ಯಾವುದೇ ಸಿನಿಮಾದ ಹಾಡುಗಳನ್ನು ಕೇಳಿದರೂ ಧ್ವನಿ ಎಸ್.ಪಿ.ಬಾಲಸುಬ್ರಮಣ್ಯಂ ಅವರದ್ದೇ ಆಗಿರುತ್ತದೆ. ವಿಷ್ಣು ಅವರ ಹಾಡುಗಳಿಗೆ ಎಸ್.ಪಿ.ಬಿ ಹೊರತಾಗಿ ಬೇರೆಯವರ ಧ್ವನಿ ಇರುವುದು ಬಹಳ ಅಪರೂಪ…

ಡಾ.ರಾಜ್ ಕುಮಾರ್ ಅವರಿಗೆ ಪಿ.ಬಿ.ಶ್ರೀನಿವಾಸ್ ಅವರ ಕಂಠಸಿರಿ ಹೇಗೆ ಒಪ್ಪುತ್ತದೆಯೋ , ಇಂದಿನ ಪೀಳಿಗೆಯ ನಟರಾದ ಸುದೀಪ್ ಅವರಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಹಾಗೂ ದರ್ಶನ್ ಅವರಿಗೆ ಹೇಮಂತ್ ಅವರ ಧ್ವನಿ ಹೇಗೆ ಒಪ್ಪುತ್ತದೆಯೋ ಹಾಗೆಯೇ ವಿಷ್ಣುವರ್ಧನ್ ಅವರ ಹಾಡುಗಳಿಗೆ ಎಸ್.ಪಿ.ಬಿ ಅವರ ಕಂಠ ಹೇಳಿಮಾಡಿಸಿದಂತೆ ಇತ್ತು.

ವಿಷ್ಣು ಅವರು ಶರೀರವಾದರೆ ಎಸ್.ಪಿ.ಬಿ ಅವರು ಶಾರೀರದಂತೆ ಇದ್ದರು. ವಿಷ್ಣುವರ್ಧನ್ ಎಸ್.ಪಿ.ಬಿ ಅವರ ಬಹಳ ದೊಡ್ಡ ಅಭಿಮಾನಿ ಕೂಡ ಹೌದು. ಪ್ರತಿಯೊಂದು ಸಿನಿಮಾ ಒಪ್ಪಿಕೊಂಡು ಅಗ್ರಿಮೆಂಟ್ ಸೈನ್ ಮಾಡುವಾಗಲೂ ನನ್ನ ಸಿನಿಮಾಗೆ ಹಾಡುಗಳನ್ನು ಎಸ್.ಪಿ.ಬಿ ಅವರೇ ಹಾಡಬೇಕು ಎಂದು ಕರಾರು ಹಾಕಿ ಒಪ್ಪಿಕೊಳ್ಳುತ್ತಿದ್ದರಂತೆ ವಿಷ್ಣುವರ್ಧನ್.

ಹಾಗೆಯೇ ಎಸ್.ಪಿ.ಬಿ ಅವರಿಗೂ ವಿಷ್ಣುವರ್ಧನ್ ಅಂದರೆ ಬಹಳ ಪ್ರೀತಿ ಇತ್ತು, ಈ ಬಗ್ಗೆ ಎಸ್.ಪಿ.ಬಿ ಅವರೇ ಹಲವಾರು ಕಾರ್ಯಕ್ರಮಗಳಲ್ಲಿ ಹೇಳಿದ್ದಾರೆ.

Trending

To Top