Film News

ವಿಭಿನ್ನವಾದ ಕಥಾಪಾತ್ರದಲ್ಲಿ ನಟಿಸಲಿದ್ದಾರೆ ದೂದ್ ಪೇಡಾ ದಿಗಂತ್

ಕನ್ನಡ ಚಿತ್ರರಂಗದ ಚಾಕೊಲೇಟ್ ಹೀರೋ, ದೂದ್ ಪೇಡಾ ದಿಗಂತ್. ಮನಸಾರೆ, ಪಾರಿಜಾತ, ಅಂತಹ ಲವ್ ಸ್ಟೋರಿ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ದಿಗಂತ್ ಅವರ ಕೈಯಲ್ಲಿ ಎರಡು ಸಿನಿಮಗಳಿವೆ. ದಿಗಂತ್ ಅಭಿನಯದ ‘ಹುಟ್ಟು ಹಬ್ಬದ ಶುಭಾಶಯಗಳು’ ಹೆಸರಿನ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಅಲ್ಲದೆ 2008ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ, ಗಾಳಿಪಟ ಸಿನಿಮಾದ ಮುಂದುವರೆದ ಭಾಗ, ಗಾಳಿಪಟ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ ದಿಗಂತ್.

ಗಾಳಿಪಟ 2 ಸಿನಿಮಾದ ಶೂಟಿಂಗ್ ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಇದರ ಜೊತೆಗೆ ಮತ್ತೊಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ ದಿಗಂತ್. ಈ ಹೊಸಬಗೆಯ ಚಿತ್ರಕ್ಕೆ ‘ಮಾರಿಗೋಲ್ಡ್’ ಎಂದು ಹೆಸರಿಡಲಾಗಿದೆ. ಈ ಹೆಸರು ಕೇಳಿದರೆ, ಬಿಸ್ಕೆಟ್ ಎಂದು ಅನಿಸುತ್ತದೆ, ಆದರೆ ಈ ಹೆಸರಿಗೂ ಸಿನಿಮಾ ಕಥೆಗೂ ಯಾವುದೇ ಸಂಬಂಧವಿಲ್ಲ.

ಮಾರಿಗೋಲ್ಡ್ ಸಿನಿಮಾ ಕಥೆ ಬೇರೆ ರೀತಿಯೇ ಇದ್ದು, ದಿಗಂತ್ ಗಾಗಿ ಹೊಸ ರೀತಿಯ ಪಾತ್ರ ಸೃಷ್ಟಿ ಮಾಡಲಾಗಿದೆ. ಹೊಸಬಗೆಯ ಪಾತ್ರವನ್ನು ಎದುರು ನೋಡುತ್ತಿದ್ದ ದಿಗಂತ್ ಗೆ ಈ ಪಾತ್ರ ಬಹಳ ಇಷ್ಟ ವಾಗಿದೆಯಂತೆ. ಈಗಾಗಲೇ ಮಾರಿಗೋಲ್ಡ್ ಸಿನಿಮಾದ ಶೂಟಿಂಗ್ ಕೆಲವು ದಿನಗಳ ಕಾಲ ನಡೆಸಿದೆ. ಬೆಂಗಳೂರು, ಚಿತ್ರದುರ್ಗ ಸೇರಿದಂತೆ ಕೆಲವು ಭಾಗಗಳಲ್ಲಿ ಈಗಾಗಲೇ ಚಿತ್ರೀಕರಣ ನಡೆಸಿಕೊಂಡಿದೆ ಚಿತ್ರತಂಡ. ಎರಡನೇ ಹಂತದ ಚಿತ್ರೀಕರಣ ಶುರುಮಾಡಲು ತಯಾರಿಯಲ್ಲಿದೆ. ಈ ಸಿನಿಮಾದಲ್ಲಿ ದಿಗಂತ್ ಗೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ಜೊತೆಗೆ ಟಗರು ಸಿನಿಮಾ ಖ್ಯಾತಿಯ ಕಾಕ್ರೋಚ್ ಸುಧಿ ಹಾಗೂ ಸಂಪತ್ ಕುಮಾರ್ ನಟಿಸಿದ್ದಾರೆ . ವೀರ್ ಸಮರ್ಥ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ ಮಾಡಿದ್ದು, ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ.

Trending

To Top