Kannada Cinema News

ವಾಸುಕಿ ವೈಭವ್‌ಗೆ ಅವರ ತಾಯಿ ಹೇಳಿದ ಕಿವಿಮಾತು

ಸ್ಪರ್ಧಿಗಳ ತಾಯಂದಿರು ಬಿಗ್ ಬಾಸ್ ಮನೆಗೆ ಬಂದು ಹೋಗುತ್ತಿರುವುದು ಗೊತ್ತೇ ಇದೆ. ಕೊನೆಯದಾಗಿ ವಾಸುಕಿ ವೈಭವ್ ಅವರ ತಾಯಿ ಜಯಂತಿ ಜಯರಾಮ್ ತೊಂಬತ್ತ ನಾಲ್ಕನೆ ದಿನ ಬಿಗ್ ಬಾಸ್ ಮನೆಗೆ ಅಡಿಯಿಟ್ಟರು. ವಾಸುಕಿಗೆ ಒಂದಷ್ಟು ಸಲಹೆಗಳನ್ನೂ ನೀಡಿದರು. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಆಡ್ತಿದ್ದೀರಾ, ಎಲ್ಲರೂ ಚೆನ್ನಾಗಿ ಆಡಿ ಎಂದು ಎಲ್ಲರಲ್ಲೂ ಉತ್ಸಾಹ ತುಂಬಿದರು. “ತಲೆಗೆ ನೀನೆ ಎಣ್ಣೆ ಹಚ್ಚಿಕೊಳ್ಳುವುದನ್ನು ಮಾಡಿಕೋ. ಮನೆ ಕಡೆ ಏನೂ ಯೋಚನೆ ಮಾಡಬೇಡ. ಇಲ್ಲಿ ಚೆನ್ನಾಗಿ ಆಡು, ವಿನ್ ಆಗಿ ಬರಬೇಕು. ಕಾಲಿಗೆ ಏಟ್ ಆಗಿತ್ತು ಅಲ್ವಾ ತೋರಿಸು” ಎಂದು ಕಾಲನ್ನು ನೋಡಿದರು. ಕೊನೆಗೆ ಮಾರುತಿನೇ ನಿನ್ನನ್ನು ಕಾಪಾಡ್ತಾನೆ ಎಂದರು. ಕೂದಲು ಕಟ್ ಮಾಡಿಕೋ ಎಂದೂ ಹೇಳಿದರು. ಬೆಳಗ್ಗೆ ಎಲ್ಲರೂ ಎದ್ದಾಗ ಅವರ ಜೊತೆಗೆ ನೀನು ಡ್ಯಾನ್ಸ್ ಮಾಡು ಎಂದರು. ಶೈನ್ ಶೆಟ್ಟಿಯನ್ನು ನೋಡಿ ನೀವಂತೂ ಅಣ್ಣತಮ್ಮನ ತರಹ ಇದ್ದೀರಾ ಎಂದರು. ಅವರ ತಾಯಿ ಬಂದ ಹೋದ ಬಳಿಕ ಹರೀಶ್ ರಾಜ್ ಮಾತನಾಡುತ್ತಾ, ನಮ್ಮ ಅಮ್ಮನ ನೋಡಿದಷ್ಟೇ ಖುಷಿ ಆಯಿತು ಎಂದರು. ಟಿಪಿಕಲ್ ಮದರ್ ಸ್ಟೈಲಲ್ಲಿ ಅಡ್ವೈಸ್ ನೀಡಿದರು ಎಂದು ವಾಸುಕಿ ತನ್ನ ತಾಯಿ ಬಗ್ಗೆ ಹೇಳಿದರು. ಅಮ್ಮನ ಮಾತಿನಂತೆ ಅವರೇ ಎಣ್ಣೆ ಹಚ್ಚಿಕೊಳ್ಳಲು ಹೋದಾಗ, ವಾಸುಕಿ ಹಂಗೆ ಹಚ್ಕೋ ಬಾರದು, ನಾನು ಹಚ್ಚುತ್ತೇನೆ ಬಾ ಎಂದು ಪ್ರಿಯಾಂಕಾ ತಲೆಗೆ ಎಣ್ಣೆ ಹಚ್ಚಿದರು

Trending

To Top